Sunday, June 7, 2026
Homeಕರಾವಳಿಉಡುಪಿಉಡುಪಿ: ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ನೀಡಿದ ಭದ್ರತೆ ಹಿಂಪಡೆಯುವಂತೆ ಎಸ್‌ಪಿಗೆ ಕಾಂಗ್ರೆಸ್‌ ಮನವಿ

ಉಡುಪಿ: ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ನೀಡಿದ ಭದ್ರತೆ ಹಿಂಪಡೆಯುವಂತೆ ಎಸ್‌ಪಿಗೆ ಕಾಂಗ್ರೆಸ್‌ ಮನವಿ

- Advertisement -
- Advertisement -

ಉಡುಪಿ: ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ನೀಡಿದ ಭದ್ರತೆ ಹಿಂಪಡೆಯುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚೀಂದ್ರ ಅವರಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯ್ತು.

ಕ್ಷುಲ್ಲಕ ವಿಚಾರಕ್ಕೆ ಬಿಜೆಪಿ ಕೆಲ ಕಾರ್ಯಕರ್ತರು ಉಡುಪಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಂದು ಘೋಷಣೆ ಕೂಗಿದ್ದಾರೆ. ಇದ್ರಿಂದ ಕಾಂಗ್ರೆಸ್ ಕಚೇರಿಗಾಗಲಿ ಅಥವಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗಾಗಲಿ ಯಾವುದೇ ಭೀತಿ ತಲೆದೋರಿಲ್ಲ.

ಜನರ ತೆರಿಗೆ ಹಣದಿಂದ ನಿರ್ವಹಿಸಲ್ಪುಡುವ ರಾಜ್ಯ ಪೊಲೀಸ್ ಇಲಾಖೆ, ಸಾರ್ವಜನಿಕರ ರಕ್ಷಣೆಗಾಗಿ ಇರುವಂತದ್ದು ಹಾಗೂ ಆ ಇಲಾಖೆಯ ದುರುಪಯೋಗ ಸಲ್ಲದು. ಹೀಗಾಗಿ ಭದ್ರತೆ ಹಿಂಪಡೆಯಿರಿ ಎಂದು ಎಸ್‌ಪಿಗೆ ಮನವಿ ಸಲ್ಲಿಸಿದ್ದಾರೆ.

- Advertisement -

Latest News

error: Content is protected !!