Wednesday, June 24, 2026
Homeಕರಾವಳಿಧರ್ಮಸ್ಥಳ ಕ್ಷೇತ್ರದ ಭಕ್ತಾಧಿಗಳ ಗೊಂದಲಕ್ಕೆ ತೆರೆ ಎಳೆಯುವ ಕೆಲಸ ಕಾಂಗ್ರೆಸ್‌ ಮಾಡಿದೆ; ಧರ್ಮಸ್ಥಳ ಪ್ರಕರಣದ ಕುರಿತು...

ಧರ್ಮಸ್ಥಳ ಕ್ಷೇತ್ರದ ಭಕ್ತಾಧಿಗಳ ಗೊಂದಲಕ್ಕೆ ತೆರೆ ಎಳೆಯುವ ಕೆಲಸ ಕಾಂಗ್ರೆಸ್‌ ಮಾಡಿದೆ; ಧರ್ಮಸ್ಥಳ ಪ್ರಕರಣದ ಕುರಿತು ವಿಧಾನಸಭೆಯ ಅಧಿವೇಶನದಲ್ಲಿ ಅಶೋಕ್‌ ರೈ ಹೇಳಿಕೆ

- Advertisement -
- Advertisement -

ಮಂಗಳೂರು: ಧರ್ಮಸ್ಥಳದಲ್ಲಿ ಕಳೆದ ಹತ್ತು ಹನ್ನೆಡರಡು ವರ್ಷಗಳ ಹಿಂದೆ ಸೌಜನ್ಯ ಅನ್ನುವ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನ ಕೊಲೆ ಮಾಡಲಾಗಿತ್ತು ಎಂಬ ಪ್ರಕರಣವು ಇಡೀ ಸಮಾಜದಲ್ಲಿ ಗೊಂದಲವನ್ನ ಸೃಷ್ಟಿಮಾಡಿದೆ. ಇನ್ನು ಧರ್ಮಸ್ಥಳದಲ್ಲಿ ಸರಣಿ ಕೊಲೆಗಳು ನಡೆದಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸರ್ಕಾರ ಎಸ್‌ ಐಟಿ ತಂಡವನ್ನ ರಚಿಸಿ ಪ್ರಕರಣದ ಕುರಿತಂತೆ ತನಿಖೆ ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ಅವರು ವಿಧಾನಸಭೆಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಈ ಕುರಿತಂತೆ ಮಾತನಾಡಿ, “ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಗೆ ಕೋರ್ಟಿನಲ್ಲಿ ಶಿಕ್ಷೆಯಾಗಿ, ನಂತರದಲ್ಲಿ ನಿರಪರಾಧಿ ಎಂದು ಬಿಡುಗಡೆಯಾಗಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ನಮ್ಮ ಸಮಾಜದಲ್ಲಿ ಸೌಜನ್ಯಳನ್ನ ಅಲ್ಲಿನವರೇ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎನ್ನುವ ಗೊಂದಲವಿದೆ. ಇದಕ್ಕೆ ಪೂರಕವೆಂಬಂತೆ ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆಗಳು ನಡೆಯುತ್ತಿದೆ. ಇದೀಗ ಸರಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಾಗಿ ಎಸ್ ಐಟಿ ತಂಡವನ್ನ ಕೂಡ ರಚನೆ ಮಾಡಲಾಗಿದ್ದು, ಪರ ವಿರೋಧಿಗಳು ಮತ್ತು ಧರ್ಮಸ್ಥಳದವರು ಕೂಡ ಈ ಒಂದು ತನಿಖೆ ಸಹಕಾರ ನೀಡಿದ್ದಾರೆ. ತನಿಖೆಯ ಈ ನಿರ್ಧಾರವನ್ನು ತೆಗೆದುಕೊಂಡಿರುವ ಮುಖ್ಯಮಂತ್ರಿ, ಗೃಹಸಚಿವ ಸೇರಿದಂತೆ ಇನ್ನಿತರಿಗೂ ನನ್ನ ಧನ್ಯವಾದಗಳು. ಧರ್ಮಸ್ಥಳಕ್ಕೆ ಕೇವಲ ರಾಜ್ಯದಲ್ಲಿ ಮಾತ್ರವಲ್ಲದೇ ರಾಷ್ಟ್ರ, ವಿಶ್ವದಲ್ಲಿಯೂ ಭಕ್ತಾದಿಗಳಿದ್ದಾರೆ. ಇಂತಹ ಗೊಂದಲಕ್ಕೆ ತೆರೆ ಎಳೆಯುವಂತ ಕೆಲಸವನ್ನ ಸರ್ಕಾರ ಮಾಡಿದೆ. ಇನ್ನು ಈ ಪ್ರಕರಣದಲ್ಲಿ ರಾಜಕೀಯ ಮಾಡುವುದು ನನಗಿಷ್ಟವಿಲ್ಲ. ಈ ಪ್ರಕರಣವನ್ನ ಎಸ್‌ ಐಟಿಗೆ ಕೊಟ್ಟಿರುವುದರಿಂದ ಜನರಿಗೆ ಕಾಂಗ್ರೆಸ್‌ ಸರ್ಕಾರದ ಮೇಲಿರುವ ಗೊಂದಲ ನಿವಾರಣೆಯಾಗಿರಬಹುದು ಎಂಬುವುದು ನನ್ನ ಅಭಿಪ್ರಾಯ,” ಎಂದು ಹೇಳಿದರು. 

- Advertisement -

Latest News

error: Content is protected !!