ನವದೆಹಲಿ : ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ, ಎಲ್ಲಾ ದೀಪಗಳನ್ನು ಆಫ್ ಮಾಡಿ ಮತ್ತು ಮೇಣದಬತ್ತಿ, ದೀಪ, ಟಾರ್ಚ್ ಅಥವಾ ಮೊಬೈಲ್ ಫ್ಲ್ಯಾಷ್ ಲೈಟ್‌ಗಳನ್ನು ನಿಮ್ಮ ಮನೆಗಳ ಹೊರಗೆ ಅಥವಾ ಬಾಲ್ಕನಿಗಳಲ್ಲಿ ಬೆಳಗಿಸಿ ಕೊರೊನಾ ವೈರಸ್‌ಗೆ ಸವಾಲು ಹಾಕಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದರು. ಪ್ರಧಾನಿ ಮೋದಿ ನೀಡಿದ ಕೊರೊನಾ ಸಂದೇಶಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧುರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೊರೊನಾ ವಿರುದ್ಧ ಹೋರಾಡುವುದಕ್ಕೂ ಮನೆಯ ಲೈಟುಗಳನ್ನು ಆರಿಸಿ ದೀಪ ಹಚ್ಚುವುದಕ್ಕೂ ಏನು ಸಂಬಂಧವಿದೆ. ಆದರೆ ನಾನು ಮಾತ್ರ ಮನೆಯ ಲೈಟೂ ಆರಿಸೋಲ್ಲ..ದೀಪನೂ ಹಚ್ಚೋಲ್ಲ, ಎಂದು ವ್ಯಂಗ್ಯವಾಡಿದರು. ನಾನು ಈ ರೀತಿ ಮಾಡಿದರೆ ನನ್ನನ್ನು ದೇಶದ್ರೋಹಿ ಎಂದು ಕರೆಯುತ್ತಾರೆ, ಅದನ್ನು ಎದುರಿಸಲು ನಾನು ಸಿದ್ದವಾಗಿದ್ದೇನೆ ಎಂದರು. ಕೊರೊನಾ ವಿರುದ್ಧ ಹೋರಾಡುವುದಕ್ಕೂ ಮನೆಯ ಲೈಟುಗಳನ್ನು ಆರಿಸಿ ದೀಪ ಹಚ್ಚುವುದಕ್ಕೂ ಏನು ಸಂಬಂಧವಿದೆ. ಆದರೆ ನಾನು ಮಾತ್ರ ಮನೆಯ ಲೈಟೂ ಆರಿಸೋಲ್ಲ..ಮೇಣದ ಬತ್ತಿಯೂ ಹಚ್ಚೋಲ್ಲ. ಇದೊಂದು ರಾಜಕೀಯ ಗಿಮಿಕ್ ಅಷ್ಟೇ ಎಂದು ಟೀಕಿಸಿದರು.
ಇಂದು ದೇಶದ ಜನತೆರೆ ಕರೆ ನೀಡಿದ ಪ್ರಧಾನಿ ಮೋದಿ ಮೇಣದಬತ್ತಿಗಳನ್ನು ಬೆಳಗಿಸುವಾಗ ಎಲ್ಲಿಯೂ ಒಂದುಗೂಡಬೇಡಿ, ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಿ ಎಂದು ಸಂದೇಶ ನೀಡಿದ್ದರು.