Wednesday, June 3, 2026
Homeಕರಾವಳಿ“ಕೈ” ಬಿಟ್ಟು “ಕಮಲ” ಹಿಡಿದ ಕಟ್ಟಾ ಕಾಂಗ್ರೆಸ್‌ ಕಾರ್ಯಕರ್ತ

“ಕೈ” ಬಿಟ್ಟು “ಕಮಲ” ಹಿಡಿದ ಕಟ್ಟಾ ಕಾಂಗ್ರೆಸ್‌ ಕಾರ್ಯಕರ್ತ

- Advertisement -
- Advertisement -

ಬೆಳ್ತಂಗಡಿ; ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆ ಬೆಳ್ತಂಗಡಿಯಲ್ಲಿ ಬಿಜೆಪಿ ಮತ್ತಷ್ಟು ಸದೃಢವಾಗುತ್ತಿದೆ. ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷ ತೊರೆದು ಬಿಜೆಪಿ ಸೇರ್ಡೆಗೊಳ್ಳುತ್ತಿದ್ದಾರೆ.

ಬಿಜೆಪಿ ಪಕ್ಷದ ತತ್ವ ಸಿದ್ಧಾಂತ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಇಂದು ದಿನಾಂಕ 21 ಏಪ್ರಿಲ್‌ 2023 ರಂದು ನಿಡ್ಲೆ ಗ್ರಾಮದ ಯೋಗೀಶ್ ಗೌಡ ನೂಜಿಲ ಅವರು ಶಾಸಕ ಹರೀಶ್‌ ಪೂಂಜ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಕಾಂಗ್ರೆಸ್‌ ಪಕ್ಷದ ವಿಭಜನೆಯ ತಂತ್ರ, ಹಿಂದೂ ವಿರೋಧಿ ನೀತಿಗಳಿಂದ ಬೇಸತ್ತಿರುವ ನೂರಾರು ಕಾರ್ಯಕರ್ತರು ಕಾಂಗ್ರೆಸ್‌ ತೊರೆದು ಮುಂದಿನ ದಿನಗಳಲ್ಲಿ ಬಿಜೆಪಿ ಜೊತೆ ಕೈ ಜೋಡಿಸಲಿದ್ದಾರೆ ಎಂದು ಶಾಸಕ ಹರೀಶ್‌ ಪೂಂಜ ಅವರು ಇದೇ ವೇಳೆ ತಿಳಿಸಿದ್ರು.

- Advertisement -

Latest News

error: Content is protected !!