Monday, April 29, 2024
Homeತಾಜಾ ಸುದ್ದಿಶಾಲಾ ಮಕ್ಕಳ ಬ್ಯಾಗ್ ಪರಿಶೀಲಿಸಿದಾಗ ಬೆಚ್ಚಿ ಬಿದ್ದ ಅಧಿಕಾರಿಗಳು; ಹೈಸ್ಕೂಲ್ ಮಕ್ಕಳ ಬ್ಯಾಗಿನಲ್ಲಿ ಪತ್ತೆಯಾಯ್ತು ಕಾಂಡೋಮ್,...

ಶಾಲಾ ಮಕ್ಕಳ ಬ್ಯಾಗ್ ಪರಿಶೀಲಿಸಿದಾಗ ಬೆಚ್ಚಿ ಬಿದ್ದ ಅಧಿಕಾರಿಗಳು; ಹೈಸ್ಕೂಲ್ ಮಕ್ಕಳ ಬ್ಯಾಗಿನಲ್ಲಿ ಪತ್ತೆಯಾಯ್ತು ಕಾಂಡೋಮ್, ಗರ್ಭ ನಿರೋಧಕ ಮಾತ್ರೆಗಳು

spot_img
- Advertisement -
- Advertisement -

ಬೆಂಗಳೂರು: ನಿಜಕ್ಕೂ ಈ ಸುದ್ದಿ ಪ್ರತಿಯೊಬ್ಬ ಪೋಷಕರು ಓದಲೇ ಬೇಕು. ಮಕ್ಕಳು ಕೇಳಿದಾಗ ಯಾಕೆ ಏನು ಎಂದು ಮರು ಪ್ರಶ್ನಿಸದೇ ಬೇಕಾದಷ್ಟು ದುಡ್ಡು ಕೊಡುವ ಹೆತ್ತವರು, ಮಾಕ್ಸ್ ಒಂದೇ ಮುಖ್ಯ ಎಂದು ಮಕ್ಕಳ ಇತರ ಚಟುವಟಿಕೆಯ ಬಗ್ಗೆ ಗಮನ ಹರಿಸದ ಪ್ರತಿಯೊಬ್ಬ ಹೆತ್ತವರು ಈ ಸುದ್ದಿಯನ್ನು ಓದಲೇ ಬೇಕು.

ನಿಜಕ್ಕೂ ನಮ್ಮ ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತವಾ ಎಂಬ ಅನುಮಾನ ಮೂಡಿಸುತ್ತದೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಈ ರೀತಿ ನಡೆಯುತ್ತಾ ಅಂದ್ರೆ ಶಾಕ್ ಆಗೋದು ಗ್ಯಾರಂಟಿ. ಬೆಂಗಳೂರಿನಲ್ಲಿ ಶಾಲೆಗೆ ಬರುವ ಮಕ್ಕಳು ಮೊಬೈಲ್ ತರುವ ಬಗ್ಗೆ ಬ್ಯಾಗ್ ಪರಿಶೀಲನೆ ಇಳಿದ ಶಿಕ್ಷಕರ ತಂಡವೊಂದಕ್ಕೆ ಶಾಕ್ ಎದುರಾಗಿದೆ. ಹಲವು ಶಾಲಾ ಮಕ್ಕಳ ಬ್ಯಾಗಳಲ್ಲಿ ಕಾಂಡೋಮ್ ಹಾಗೂ ಗರ್ಭ ನಿರೋಧಕ ಮಾತ್ರೆಗಳು ಪತ್ತೆಯಾಗಿವೆ.

ಇದರ ಜೊತೆಗೆ ಸಿಗರೇಟ್, ಲೈಟರ್, ಫೆವಿಕಾಲ್ ಮುಂತಾದ ವಸ್ತುಗಳು ಸಹ ಸಿಕ್ಕಿವೆ. 9 ಮತ್ತು 10ನೇ ತರಗತಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಬ್ಯಾಗ್ ಗಳಲ್ಲಿ ಕಾಂಡೋಮ್, ಗರ್ಭ ನಿರೋಧಕ‌ ಮಾತ್ರೆ ಪತ್ತೆಯಾಗಿದ್ದು, ಈ ಬಗ್ಗೆ ಎಚ್ಚರವಹಿಸುವಂತೆ ಶಾಲಾ ಆಡಳಿತ ಮಂಡಳಿಗಳು ಪೋಷಕರಿಗೆ ಸೂಚನೆ ನೀಡಿದ್ದಾರೆ.


ತರಗತಿಗೆ ವಿದ್ಯಾರ್ಥಿಗಳು ಮೊಬೈಲ್‌ ಫೋನ್‌ ತರುತ್ತಾರೆ ಎಂದು ಕೆಲವು ಶಿಕ್ಷಕರು ನೀಡಿದ ದೂರಿನ ಮೇರೆಗೆ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸಲು ಕೆಲವು ಶಾಲೆಗಳು ಆರಂಭಿಸಿವೆ. ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸುವಂತೆ ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಕೂಡ ತನ್ನ ಸದಸ್ಯ ಶಾಲೆಗಳಿಗೆ ಸೂಚಿಸಿತ್ತು. ಕಾಮ್ಸ್‌ನ ಶೇ 80ರಷ್ಟು ಸದಸ್ಯ ಶಾಲೆಗಳು ದಿಢೀರ್ ಆಗಿ ತಮ್ಮ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸಿ ಮಾಹಿತಿ ನೀಡಿವೆ. ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಸೆಲ್ ಫೋನ್‌ಗಳಲ್ಲದೆ, ಕಾಂಡೋಮ್‌ಗಳು, ಗರ್ಭನಿರೋಧಕಗಳು, ಲೈಟರ್‌ಗಳು, ಸಿಗರೇಟ್‌ಗಳು, ವೈಟ್‌ನರ್‌ಗಳು ಮತ್ತು ದೊಡ್ಡ ಮೊತ್ತದ ಹಣ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಇನ್ನು ಈ ಕುರಿತು ಶಿಕ್ಷಕರು ಪ್ರಶ್ನಿಸಿದಾಗ ಸಿಕ್ಕ ಉತ್ತರವೂ ಆಘಾತಕಾರಿಯಾಗಿತ್ತು. ‘ಕಾಲ ಬದಲಾಗಿದೆ ಸರ್, ಹುಡುಗ-ಹುಡುಗಿಯರು ಈಗ ಹೆಚ್ಚು ಸಮಯ ಒಟ್ಟೊಟ್ಟಿಗೆ ಕಳೆಯುತ್ತೇವೆ. ಟ್ಯೂಷನ್​ಗಳಿಗೆ ಹೋಗುತ್ತೇವೆ. ಕೆಲವೊಮ್ಮೆ ಸ್ವಲ್ಪ ಥ್ರಿಲ್ ಬೇಕು ಅನ್ನಿಸುತ್ತೆ. ಇಂಥ ಸಂದರ್ಭದಲ್ಲಿ ನಮ್ಮ ಮುನ್ನೆಚ್ಚರಿಕೆಯಲ್ಲಿ ನಾವಿರಬೇಕಲ್ವಾ’ ಎಂದು ಕೆಲ ವಿದ್ಯಾರ್ಥಿಗಳು ತಮ್ಮ ಪ್ರಶ್ನಿಸಿದ ಶಾಲಾ ಸಿಬ್ಬಂದಿಗೆ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!