Friday, June 5, 2026
Homeಕರಾವಳಿವಿಧಾನ ಪರಿಷತ್ ಕಲಾಪದಲ್ಲಿ ಭಾಷಾ ವಿಜ್ಞಾನಿ ಪ್ರೊ. ಕೋಡಿ ಕುಶಾಲಪ್ಪ ಗೌಡ ಅವರಿಗೆ ಸಂತಾಪ

ವಿಧಾನ ಪರಿಷತ್ ಕಲಾಪದಲ್ಲಿ ಭಾಷಾ ವಿಜ್ಞಾನಿ ಪ್ರೊ. ಕೋಡಿ ಕುಶಾಲಪ್ಪ ಗೌಡ ಅವರಿಗೆ ಸಂತಾಪ

- Advertisement -
- Advertisement -

ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಪ್ರೊ. ಕೋಡಿ ಕುಶಾಲಪ್ಪ ಗೌಡ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಲಾಯಿತು. ಹಿರಿಯ ಭಾಷಾ ವಿಜ್ಞಾನಿಯಾಗಿದ್ದ ಕುಶಾಲಪ್ಪ ಗೌಡ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.

ಸುಳ್ಯ ತಾಲೂಕಿನ ಗಡಿಭಾಗದ ಪೆರಾಜೆ ಗ್ರಾಮದ ಕೋಡಿ ಮನೆತನದ ಕುಶಾಲಪ್ಪ ಗೌಡ ಸಪ್ಟೆಂಬರ್ 3 ರಂದು ನಿಧನ ಹೊಂದಿದ್ದರು. ವಿಧಾನ ಪರಿಷತ್ ನಲ್ಲಿ ಪ್ರೊ. ಕೋಡಿ ಕುಶಾಲಪ್ಪ ಗೌಡ ಅವರ ಜೊತೆ ಉಮೇಶ್ ಕತ್ತಿ, ಎಂ. ರಘುಪತಿ, ಎಂ.ಡಿ. ರಮೇಶ್ ರಾಜು, ಪಂಡಿತ್ ಶಿವಕುಮಾರ್ ಶರ್ಮಾ, ಶಿವಮೊಗ್ಗ ಸುಬ್ಬಣ್ಣ ಮತ್ತು ಡಾ. ಗುರುರಾಜ್ ಹೆಬ್ಬಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಲಾಗಿದೆ.

- Advertisement -

Latest News

error: Content is protected !!