- Advertisement -
![]()
- Advertisement -
ಧರ್ಮಸ್ಥಳ: ಇತ್ತೀಚೀನ ದಿನದಲ್ಲಿ ಪುತ್ತೂರಿನ ಪ್ರಖ್ಯಾತ ವೈದ್ಯರಾದ ಪ್ರಸಾದ್ ಭಂಡಾರಿಯವರು ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರಿಶ್ಚಿಯನ್ ಸಮುದಾಯ ಮತ್ತು ಶಿಕ್ಷಣ ಸಂಸ್ಥೆಗಳ ಬಗ್ಗೆ ಆಡಿರುವ ಮಾತುಗಳು ನಮ್ಮ ಸಮುದಾಯಕ್ಕೆ ನೋವುಂಟು ಮಾಡಿದೆ. ಪ್ರತ್ಯೇಕವಾಗಿ ದಕ್ಷಿಣ ಕನ್ನಡದಲ್ಲಿ ಕ್ರಿಶ್ಚಿಯನ್ ಸಮುದಾಯವು ಯಾರಿಗೂ ಕೇಡು ಬಯಸದೆ ಎಲ್ಲಾ ಸಮುದಾಯದ ಜೊತೆ ಸಹಬಾಳ್ವೆಯನ್ನು ನಡೆಸಿ ಎಲ್ಲರ ಜೊತೆ ಸೌಹಾರ್ದತೆಯಿಂದ ಬದುಕುತಿದ್ದೇವೆ.
ಈ ಸಂದರ್ಭದಲ್ಲಿ ಈ ತರಹದ ಬಾಲಿಶವಾದ ಹೇಳಿಕೆಗಳು ಸಮುದಾಯಗಳ ಮಧ್ಯದಲ್ಲಿ ಬಿರುಕುಂಟು ಮಾಡಲು ಕಾರಣವಾಗುತ್ತದೆ. ಆದುದರಿಂದ ಮೋಹನ್ ಭಂಡಾರಿಯಂತಹ ವಿದ್ಯಾವಂತರಾದ ಹಿರಿಯ ವ್ಯಕ್ತಿಗಳು ದಯವಿಟ್ಟು ಸಮುದಾಯ ಸಾಮರಸ್ಯಕ್ಕೆ ಹಾನಿ ಮಾಡದೇ ಗೌರವಯುತವಾಗಿ ಕಾರ್ಯಗಳನ್ನು ಗ್ರಹಿಸಬೇಕಾಗಿ ಎಂದು ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್(ಕೆ.ಎಸ್.ಎಮ್.ಸಿ.ಎ) ಧರ್ಮಸ್ಥಳ ವಲಯ ಆಗ್ರಹಿಸಿದೆ.
- Advertisement -


