Wednesday, June 3, 2026
Homeಕರಾವಳಿಮಂಗಳೂರು : ಮೆಹಂದಿ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಡ್ಯಾನ್ಸ್ ಮಾಡಿದವರ ವಿರುದ್ಧ ಎಫ್ ಐಆರ್

ಮಂಗಳೂರು : ಮೆಹಂದಿ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಡ್ಯಾನ್ಸ್ ಮಾಡಿದವರ ವಿರುದ್ಧ ಎಫ್ ಐಆರ್

- Advertisement -
- Advertisement -

ಮಂಗಳೂರು : ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿ ಮೆಹಂದಿ ಕಾರ್ಯಕ್ರಮದಲ್ಲಿ ಗುಂಪುಗೂಡಿ ನೃತ್ಯ ಮಾಡಿದ ಆರೋಪದಡಿ ಮಂಗಳೂರಿನ ಕೋಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರಿನ ಪಾವೂರಿನಲ್ಲಿ ಮೇ 20ರಂದು ತಮ್ಮ ಮಗಳ ಮದುವೆ ಕಾರ್ಯಕ್ರಮ ನಡೆಸಲು ಶೋಭ ಎಂಬುವರು ಪಾವೂರು ಪಂಚಾಯತಿಯಿಂದ ಅನುಮತಿ ‌ಪಡೆದಿದ್ದರು. ಮದುವೆಗೆ ಮಾತ್ರ ಅನುಮತಿ ಪಡೆದ ವಧುವಿನ ಕಡೆಯವರು ಮದುವೆಯ ಮುನ್ನ ದಿನ ರಾತ್ರಿ ಮೆಹಂದಿ ಕಾರ್ಯಕ್ರಮ ಆಯೋಜಿಸಿದ್ದರು.

ಅನುಮತಿ ಇಲ್ಲದಿದ್ದರೂ ಧ್ವನಿವರ್ಧಕ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನೃತ್ಯ ಮಾಡಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಪಾವೂರು ಪಂಚಾಯತಿ ಪಿಡಿಓ ಸುಧಾರಾಣಿ ಅವರು ಕೋವಿಡ್ ನಿಯಮಾವಳಿ ಉಲ್ಲಂಘಿಸಿರುವುದರಿಂದ ಕಾನೂನು ಕ್ರಮ ಕೈಗೊಳ್ಳುವಂತೆ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಸೂಚಿಸಿದ್ದಾರೆ. ಅವರ ಆದೇಶ ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ.

- Advertisement -

Latest News

error: Content is protected !!