Friday, June 5, 2026
Homeಕರಾವಳಿಉಜಿರೆ: 15 ದಿನಗಳ ಅಂತರದಲ್ಲಿ ಒಂದೇ ಕುಟುಂಬದ 3 ಮಂದಿ ಬಲಿ

ಉಜಿರೆ: 15 ದಿನಗಳ ಅಂತರದಲ್ಲಿ ಒಂದೇ ಕುಟುಂಬದ 3 ಮಂದಿ ಬಲಿ

- Advertisement -
- Advertisement -

ಬೆಳ್ತಂಗಡಿ: ಕೇವಲ 15 ದಿನಗಳ ಅಂತರದಲ್ಲಿ ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸ್ತವ್ಯವಿರುವ ಒಂದೇ ಕುಟುಂಬದ ಮೂರು ಮಂದಿ ಮೃತಪಟ್ಟಿದ್ದಾರೆ.

ಉಜಿರೆ ಗ್ರಾಮದ ಗಾಂಧಿನಗರ ನಿವಾಸಿ ಪುರಲ್ಲ(92.ವ) ರವರು ಕೊರೊನಾಗೆ ಬಲಿಯಾಗಿದ್ದು, ಅವರ ಪುತ್ರಿ ಅಪ್ಪಿ(45.ವ) ಹಾಗೂ ಅಪ್ಪಿಯವರ ಪತಿ ಗುರುವ(52.ವ) ರವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಉಜಿರೆ ಗ್ರಾ.ಪಂ ಮಾಜಿ ಅಧ್ಯಕ್ಷ ಶ್ರೀನಿವಾಸ ರವರ ತಂದೆ ಪುರಲ್ಲ ರವರು ಕೊರೊನಾ ಸಾಂಕ್ರಾಮಿಕ ರೋಗದಿಂದ ಬಳಲಿ ಮೇ.13 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದಾದ ನಂತರ ಮೃತರ ಪುತ್ರಿ ಅಪ್ಪಿ ರವರು ಮೇ .23 ರಂದು ಹಾಗೂ ಮೃತರ ಅಳಿಯ ಗುರುವ (52.)ರವರು ಮೇ.27 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಒಂದೇ ತಿಂಗಳಲ್ಲಿ ಮನೆಯ ಮೂರೂ ಸದಸ್ಯರನ್ನು ಕಳೆದುಕೊಂಡಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -

Latest News

error: Content is protected !!