Friday, June 5, 2026
Homeಕರಾವಳಿಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಪೊಲೀಸರಿಂದ ದಾಳಿ ಪ್ರಕರಣ; ರೇಡ್ ವೇಳೆ ಬೀಡಿ ಸಿಗರೇಟ್‌ ತಂಬಾಕು ಮಾತ್ರ...

ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಪೊಲೀಸರಿಂದ ದಾಳಿ ಪ್ರಕರಣ; ರೇಡ್ ವೇಳೆ ಬೀಡಿ ಸಿಗರೇಟ್‌ ತಂಬಾಕು ಮಾತ್ರ ಸಿಕ್ಕಿದೆ ಎಂದು ಪೊಲೀಸ್‌ ಆಯುಕ್ತರಿಂದ ಸ್ಪಷ್ಟನೆ

- Advertisement -
- Advertisement -

ಮಂಗಳೂರು : ಜಿಲ್ಲಾ ಕಾರಾಗೃಹದಲ್ಲಿ ಇಂದು ಪೊಲೀಸರು ರೇಡ್‌ ಮಾಡಿದ ವೇಳೆ ಬೀಡಿ ಸಿಗರೇಟ್‌ ತಂಬಾಕು ಮಾತ್ರ ಸಿಕ್ಕಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಕುಲ್‌ದೀಪ್‌ ಆರ್‌ ಜೈನ್‌ ಸ್ಪಷ್ಟನೆ ನೀಡಿದ್ದಾರೆ.

ಇಂದು ಬೆಳಗ್ಗೆ ಮಂಗಳೂರಿನ ಕೊಡಿಯಲ್‌ ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಸುಮಾರು 250ಕ್ಕೂ ಹೆಚ್ಚು ಪೊಲೀಸರು ದಿಢೀರ್ ರೈಡ್‌ ಮಾಡಿದ್ದರು. ಬಳಿಕ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ನೇತೃತ್ವದಲ್ಲಿ, ಡಿಸಿಪಿ ಅಂಶುಕುಮಾರ್ ಸಹಿತ ಹಿರಿಯ ಅಧಿಕಾರಿಗಳು ತಪಾಸಣೆ ನಡೆಸಿದ್ದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮಂಗಳೂರು ಪೊಲೀಸ್‌ ಆಯುಕ್ತ ಕುಲ್‌ದೀಪ್‌ ಆರ್‌ ಜೈನ್‌ ದಾಳಿ ವೇಳೆ ಜಿಲ್ಲಾ ಕಾರಾಗೃಹದಲ್ಲಿ ಬೀಡಿ ಸಿಗರೇಟ್‌ ತಂಬಾಕು ಮಾತ್ರ ಸಿಕ್ಕಿದೆ ಬೇರೆ ಏನು ಸಿಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

- Advertisement -

Latest News

error: Content is protected !!