Thursday, June 4, 2026
Homeಕರಾವಳಿಸುಬ್ರಹ್ಮಣ್ಯ: ಗುಂಡ್ಯ ಬಳಿ ರಸ್ತೆ ಬದಿ ಮಲಗಿದ್ದಾತನ ಮೇಲೆ ಹರಿದ ಲಾರಿ; ವ್ಯಕ್ತಿ ಸ್ಥಳದಲ್ಲೇ ಸಾವು

ಸುಬ್ರಹ್ಮಣ್ಯ: ಗುಂಡ್ಯ ಬಳಿ ರಸ್ತೆ ಬದಿ ಮಲಗಿದ್ದಾತನ ಮೇಲೆ ಹರಿದ ಲಾರಿ; ವ್ಯಕ್ತಿ ಸ್ಥಳದಲ್ಲೇ ಸಾವು

- Advertisement -
- Advertisement -

ಸುಬ್ರಹ್ಮಣ್ಯ: ಗುಂಡ್ಯ ಬಳಿ ಇಂದು ರಸ್ತೆ ಬದಿ ಮಲಗಿದ್ದ  ವ್ಯಕ್ತಿಯೊಬ್ಬರ ಮೇಲೆ ಲಾರಿಯೊಂದು ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಕೇರಳದ ಮೂಲದ ಪೊನ್ನಪ್ಪನ್(ವ.50) ಮೃತಪಟ್ಟ ವ್ಯಕ್ತಿ. ಕಳೆದ 15 ವರ್ಷದಿಂದ ಗುಂಡ್ಯ ಪರಿಸರದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಇವರು ಸ್ಥಳೀಯವಾಗಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.ಇಂದು ಮುಂಜಾನೆ ಅವರು ರಸ್ತೆ ಬದಿ ಮಲಗಿದ್ದ ವೇಳೆ ಲಾರಿ ಹಾದು ಹೋಗಿದೆ. ಲಾರಿ ಸಹಿತ ಚಾಲಕ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.

ನೆಲ್ಯಾಡಿ ಹೊರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತ ದೇಹವನ್ನು ಉಪ್ಪಿನಂಗಡಿ ಆಸ್ಪತ್ರೆಯ ಶವಗಾರಕ್ಕೆ ಕಳುಹಿಸಿದ್ದಾರೆ.

- Advertisement -

Latest News

error: Content is protected !!