Monday, April 29, 2024
Homeಕರಾವಳಿಬೆಳ್ತಂಗಡಿ : ಗುರುವಾಯನಕೆರೆ ಖಾಸಗಿ ಕಾಲೇಜಿಗಿಲ್ಲ 144 ಸೆಕ್ಷನ್ : ಕಾನೂನು ಮೀರಿ ಆರ್ಕೆಸ್ಟ್ರಾ ಮತ್ತು...

ಬೆಳ್ತಂಗಡಿ : ಗುರುವಾಯನಕೆರೆ ಖಾಸಗಿ ಕಾಲೇಜಿಗಿಲ್ಲ 144 ಸೆಕ್ಷನ್ : ಕಾನೂನು ಮೀರಿ ಆರ್ಕೆಸ್ಟ್ರಾ ಮತ್ತು ಮ್ಯಾಗ್ಸಿನ್ ಬಿಡುಗಡೆ ಕಾರ್ಯಕ್ರಮ: “ಬೆಳ್ತಂಗಡಿಯಲ್ಲಿ ಉಪದ್ರಮಾಡುವವರು ಇರುವುದು” ಎಂದ ಅಧ್ಯಕ್ಷ

spot_img
- Advertisement -
- Advertisement -

ಬೆಳ್ತಂಗಡಿ : ಕರಾವಳಿ ಜಿಲ್ಲೆ ನಡೆಯುತ್ತಿರುವ ಸರಣಿ ಕೊಲೆ ಪ್ರಕರಣ ಜಿಲ್ಲೆಯಲ್ಲಿ ಕೊತ ಕೊತ ಉರಿಯುತ್ತಿದ್ದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುರಕ್ಷಿತತೆಯ ಹಿತದೃಷ್ಟಿಯಿಂದ ಸೆಕ್ಷನ್ 144 ಜಾರಿಗೊಳಿಸಿದ್ದು  ಅದಲ್ಲದೆ ಸಂಜೆ 6 ಗಂಟೆ ಬಳಿಕ ಅಂಗಡಿ, ವೈನ್ ಶಾಪ್ ,ಬಾರ್ ಮುಂತಾದವುಗಳನ್ನು ಸೋಮವಾರದವರೆಗೆ ಬಂದ್ ಮಾಡಲು ಆದೇಶ ಹೊರಡಿಸಿದ್ದಾರೆ. ಆದ್ರೆ ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿರುವ ಖಾಸಗಿ ಕಾಲೇಜಿಗೆ ಮಾತ್ರ ಅನ್ವಯವಾಗಿಲ್ಲ. ಇದನ್ನು ಪ್ರಶ್ನಿಸಲು ಹೋದವರೊಂದಿಗೆ ರಂಪಾಟ ಮಾಡಿ ಕಾರ್ಯಕ್ರಮ ಮುಂದುವರಿಸಿದ್ದಾರೆ. ಕೊನೆಗೆ ರಾತ್ರಿ 7:05 ಗಂಟೆಗೆ ಕಾರ್ಯಕ್ರಮ ರದ್ದು ಮಾಡಿ ಹೋಗಿರುವ ಘಟನೆ ಬೆಳ್ತಂಗಡಿಯ ಸಂತೆಕಟ್ಟೆ ಖಾಸಗಿ ಸಭಾಂಗಣದಲ್ಲಿ ನಡೆದಿದೆ.

ಕಳೆದ ಕೆಲ ದಿನಗಳಿಂದ ರಕ್ತಪಾತದಿಂದ ಕರಾವಳಿ ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಿದ್ದು ಜನರು ಓಡಾಡಲು ಭಯಪಡುತ್ತಿದ್ದಾರೆ. ಆದ್ರೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿರುವ  ಖಾಸಗಿ ಕಾಲೇಜಿನ ಆಡಳಿತ ಮಂಡಳಿಗೆ ಮಾತ್ರ ಕಾನೂನು ಯಾವುದೇ ಭಯ ಇಲ್ಲ. ಇನ್ನೊಂದೆಡೆ ನೂರಾರು ಮಕ್ಕಳ ರಕ್ಷಣೆ ಮಾಡಬೇಕಾದ ಜವಾಬ್ದಾರಿ ಕೂಡ ಇವರ ತಲೆಯಲ್ಲಿಲ್ಲ.

ಘಟನೆ ವಿವರ : ಶುಕ್ರವಾರ ಸಂಜೆ ಆರು ಗಂಟೆ ಕಳೆದರೂ ಬೆಳ್ತಂಗಡಿ ಸಂತೆಕಟ್ಟೆ ಬಳಿ ಇರುವ ಖಾಸಗಿ ಸಭಾಂಗಣದಲ್ಲಿ ನೂರಾರು ವಿದ್ಯಾರ್ಥಿಗಳನ್ನು ಸೇರಿಸಿ ಕಾಲೇಜಿನ ಮ್ಯಾಗ್ಸಿನ್ ಮತ್ತು ಆರ್ಕೆಸ್ಟ್ರಾ ಕಾರ್ಯಕ್ರಮವನ್ನು ಸಭಾಂಗಣದಿಂದ ಹೊರಗಡೆ ಕೇಳುವಂತೆ ಸೌಂಡ್ ಮಾಡಿಕೊಂಡು ನಡೆಸುತ್ತಿದ್ದರು. ಇದರ ಬಗ್ಗೆ ಅಕ್ಕಪಕ್ಕದವರು ಬೆಳ್ತಂಗಡಿ ತಹಶೀಲ್ದಾರ್ ಮತ್ತು ನಗರ ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಿದ್ದರು. ಆದ್ರೆ ಇದಕ್ಕೆ ಯಾವುದೇ ಕ್ಯಾರೆ ಮಾಡದೆ ಕಾರ್ಯಕ್ರಮ ಮುಂದುವರಿಸಿದ್ದರು. ನಂತರ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಬಂದ ಪೊಲೀಸರ ಮೇಲೆ ರೆಗಾಡಿದ್ದಾರೆ ನಮಗೆ ಯಾವುದೇ ಮಾಹಿತಿ ಇಲ್ಲ ನಾವು ಒಳಗಡೆ ಕಾರ್ಯಕ್ರಮ ಮಾಡುವುದು ಎಂದು ಬೊಬ್ಬೆ ಹಾಕಿ ಒಳಗಡೆ ಬಾಗಿಲು ಲಾಕ್ ಮಾಡಿ ಕಾರ್ಯಕ್ರಮ ಮತ್ತೆ ಮುಂದುವರಿಸಿದ್ದಾರೆ. ಈ ವೇಳೆ ನಗರ ಪಂಚಾಯತ್ ಉಪಾಧ್ಯಕ್ಷರಿಗೆ ಮಾಹಿತಿ ಸಿಕ್ಕಿ ಸ್ಥಳಕ್ಕೆ ಮಾಧ್ಯಮಮಿತ್ರರು,ಸಾರ್ವಜನಿಕರು ಬಂದಾಗ ಉಪಾಧ್ಯಕ್ಷರೊಂದಿಗೂ ಕಾಲೇಜಿನ ಅಧ್ಯಕ್ಷ ಸಲಹೆಗಾರೆ ಹಾಗೂ ಮತ್ತಿತರರ ಸಿಬ್ಬಂದಿ ಬಂದು ವಾಗ್ವಾದಕಿಳಿದರು. ಈ ವೇಳೆ ಅಧ್ಯಕ್ಷರು ರಂಪಾಟ ಎಬ್ಬಿಸಿದ್ದು ” ಬೆಳ್ತಂಗಡಿಯಲ್ಲಿ ಕಾಲೇಜ್ ಮಾಡಿ ದೊಡ್ಡ ತಪ್ಪುಮಾಡಿದ್ದೇವೆ ನಮಗೆ ಕೆಲವರು ಬೆಳ್ತಂಗಡಿಯಲ್ಲಿ ಕಾಲೇಜ್ ಮಾಡಬೇಡಿ ಇಲ್ಲಿ ಉಪದ್ರ ಮಾಡುವವರು ಇರುವುದು ” ನಾವು ಮಂಗಳೂರಲ್ಲಿ ಕಾಲೇಜ್ ಮಾಡುತ್ತೇವೆ ” ಎಂದೆಲ್ಲಾ ಘರ್ಜಿಸಿ ಒಳಗಡೆ ಓಡಿ ಹೋದರು. ಕೊನೆಗೆ ಪೊಲೀಸರು ವಾರ್ನಿಂಗ್ ನೀಡಿದ ಬಳಿಕ ಸುಮಾರು 7:05 ಗಂಟೆಗೆ ಕಾರ್ಯಕ್ರಮ ನಿಲ್ಲಿಸಿ ಮಕ್ಕಳನ್ನು ಬಸ್ ಮೂಲಕ ವಾಪಸ್ ಕರೆದುಕೊಂಡು ಹೋದರು. ಕೊನೆಗೆ ಕಾಲೇಜಿನ ಅಧ್ಯಕ್ಷ  ಹೊರಗಡೆ ಬಾರದೆ ಸಿಬ್ಬಂದಿಯನ್ನು ಕಳುಹಿಸಿ ಮಾಧ್ಯಮ ಹಾಗೂ ಪತ್ರಕರ್ತರನ್ನು ಸಮಾಧಾನ ಪಡಿಸಿ ಸುದ್ದಿ ಮಾಡದಂತೆ ಪ್ರಯತ್ನಿಸಿದರು ಪ್ರಯೋಜನ ಆಗಿಲ್ಲ. ಘರ್ಜಿಸುತ್ತಿದ್ದ ಕಾಲೇಜಿನ ಅಧ್ಯಕ್ಷ ಕೊನೆಯವರೆಗೂ ಪತ್ತೆಯಾಗದೆ ಸಭಾಂಗಣದ ಒಳಗಡೆ ನಾಪತ್ತೆಯಾಗಿ ಕೂತಿದ್ದರು.

ಕೆರೆಗೆ ಕಾಲೇಜಿನ ಲ್ಯಾಬ್ ನೀರು ಬಿಟ್ಟು ಸಾವಿರಾರು ಮೀನುಗಳು ಸಾವನ್ನಪ್ಪಿತ್ತು : ಗುರುವಾಯನಕೆರೆ ಕೆರೆಯ ಪಕ್ಕದಲ್ಲಿಯೇ ಯಾವ ರೀತಿಯಲ್ಲಿ ಕಾಲೇಜ್ ನಿರ್ಮಿಸಿದ್ದಾರೆ ಅಂತ ನೋಡಿದ್ರೆ ಪರಮಾತ್ಮನಿಗೆ ಗೊತ್ತು. ಕೆಲ ತಿಂಗಳ ಹಿಂದೆ ಕಾಲೇಜಿನ ಲ್ಯಾಬ್ ನಿಂದ ವಿಷಮಿಶ್ರಿತವಾಗಿ ಬರುವ ನೀರು ಕೆರೆಗೆ ಬಿಟ್ಟು ಲಕ್ಷಾಂತರ ಮೌಲ್ಯದ ಸಾವಿರಾರು ಮೀನುಗಳು ಸಾವನ್ನಪ್ಪಿತ್ತು ಈ ಪ್ರಕರಣ ಭಾರಿ ಸುದ್ದಿಯಾಗಿತ್ತು. ನಂತರ ಕುವೆಟ್ಟು ಗ್ರಾಮ ಪಂಚಾಯತ್ ತನಿಖೆಯ ನಡೆಸಿ ಕಾಲೇಜಿನ ಮೇಲೆ  ಸುಮಾರು 2 ಲಕ್ಷ ಮಿಕ್ಕಿ ದಂಡ ವಿಧಿಸಿದ್ದರು.

ಈ  ಕಾಲೇಜಿನ ಮೇಲೆ ಹಲವು ಆರೋಪಗಳು ಕೇಳಿ ಬರುತ್ತಿದ್ದರೂ ಕಾಲೇಜಿನ ಆಡಳಿತ ಮಂಡಳಿ ಕ್ಯಾರೆ ಮಾಡುತ್ತಿಲ್ಲ ಇವರ ದುರಂಹಕಾರ ಮಾತ್ರ ಕಡಿಮೆ ಅಗುತ್ತಿಲ್ಲ.

- Advertisement -
spot_img

Latest News

error: Content is protected !!