Saturday, June 6, 2026
Homeಕರಾವಳಿಉಡುಪಿಕಾರ್ಕಳದಲ್ಲಿ ಅಪಘಾತಕ್ಕೆ ವಿದ್ಯಾರ್ಥಿ ಬಲಿ

ಕಾರ್ಕಳದಲ್ಲಿ ಅಪಘಾತಕ್ಕೆ ವಿದ್ಯಾರ್ಥಿ ಬಲಿ

- Advertisement -
- Advertisement -

ಕಾರ್ಕಳ : ಪರೀಕ್ಷೆ ಮುಗಿಸಿ ಕಾಲೇಜಿನಿಂದ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಮುರತ್ತಂಗಡಿಯಲ್ಲಿ ಹಾಲು ಸಾಗಾಟದ ಟೆಂಪೊಗೆ ಡಿಕ್ಕಿಯಾಗಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕಾರ್ಕಳದ ಸಾಣೂರು ಸಮೀಪ ಮುರತ್ತಂಗಡಿಯಲ್ಲಿ ನಡೆದಿದೆ. ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿ ಸಾಣೂರು ಗ್ರಾಮದ ಮನನ್‌ (19) ಮೃತ ದುರ್ದೈವಿ.

ಪರೀಕ್ಷೆ ಮುಗಿಸಿ ಮನನ್ ಕಾಲೇಜಿನಿಂದ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಮುರತ್ತಂಗಡಿಯಲ್ಲಿ ಹಾಲು ಸಾಗಾಟದ ಟೆಂಪೊಗೆ ಡಿಕ್ಕಿಯಾಗಿದ್ದು, ಈ ವೇಳೆ ಅವರು ರಸ್ತೆಗೆಸೆಯಲ್ಪಟ್ಟಿದ್ದು, ಮನನ್‌ ಮೇಲೆ ಟಿಪ್ಪರ್‌ ಹರಿದು ಹೋಗಿದೆ.ಗಂಭೀರವಾಗಿ ಗಾಯಗೊಂಡ ಮನನ್‌ನನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ಕರೆ ತರಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!