Saturday, May 4, 2024
Homeತಾಜಾ ಸುದ್ದಿಮಂಗಳೂರು: ಭಾರೀ ಮಳೆಗೆ ಬೆಳರಿಂಗೆ ಸರ್ಕಾರಿ ಶಾಲೆ ಕಟ್ಟಡ ಕುಸಿತ: ಪಕ್ಕದಲ್ಲಿರುವ ಮಸೀದಿಯಲ್ಲಿ ಶಾಲೆ ನಡೆಸುತ್ತಿರುವ...

ಮಂಗಳೂರು: ಭಾರೀ ಮಳೆಗೆ ಬೆಳರಿಂಗೆ ಸರ್ಕಾರಿ ಶಾಲೆ ಕಟ್ಟಡ ಕುಸಿತ: ಪಕ್ಕದಲ್ಲಿರುವ ಮಸೀದಿಯಲ್ಲಿ ಶಾಲೆ ನಡೆಸುತ್ತಿರುವ ಶಿಕ್ಷಕರು

spot_img
- Advertisement -
- Advertisement -

ಮಂಗಳೂರು: ನಿನ್ನೆ ಸುರಿದ ಭಾರೀ ಮಳೆಗೆ ತಲಪಾಡಿಯ ಕಿನ್ಯಾ ಗ್ರಾಮದ ಬೆಳರಿಂಗೆ ಸ.ಹಿ.ಪ್ರಾ.ಶಾಲೆ ಕಟ್ಟಡ ಕುಸಿದ ಘಟನೆ ನಡೆದಿದೆ. ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ರಾತ್ರಿ ವೇಳೆ ಕುಸಿದ ಪರಿಣಾಮ ಭಾರೀ ಅಪಾಯವೊಂದು ತಪ್ಪಿದಂತಾಗಿದೆ.

ಈ ಶಾಲೆಯಲ್ಲಿ 127 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿರುವ ಬಗ್ಗೆ ಕಳೆದ ವರ್ಷವೇ ಶಿಕ್ಷಣಾಧಿಕಾರಿಗಳಿಗೆ ಶಾಲಾ ಅಭಿವೃದ್ಧಿ ಸಮಿತಿ ಹಲವಾರು ಬಾರಿ ದೂರು ನೀಡಿದೆ. ಈ ವೇಳೆ ಪರಿಶೀಲನೆಗೆ ಸ್ಥಳಕ್ಕೆ ಬಂದಿದ್ದ ಜಿಪಂ ಇಂಜಿನಿಯರ್ ನಿತಿನ್ ಎಂಬುವರು ಶಾಲಾ ಕಟ್ಟಡ ಗಟ್ಟಿಮುಟ್ಟಾಗಿದೆ ಎಂದು ಸರ್ಟಿಫಿಕೇಟ್ ನೀಡಿ ಹೋಗಿದ್ದರು‌. ಆದರೆ ಇದೀಗ ಶಾಲೆ ಆರಂಭವಾದ ದಿನವೇ ಸುರಿದ ಮಳೆಗೆ ಕಟ್ಟಡ ಸಂಪೂರ್ಣ ಕುಸಿದಿದೆ.

ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡದ ಮೇಲ್ಛಾವಣಿ ಸಂಪೂರ್ಣ ಕುಸಿದಿದೆ. ಇದೀಗ ಶಾಲೆ ಕುಸಿಯುವ ಭೀತಿಯ ಹಿನ್ನೆಲೆಯಲ್ಲಿ ಶಾಲೆಯಲ್ಲಿ ತರಗತಿ ನಡೆಸದೆ ಪಕ್ಕದ ಮಸೀದಿಯಲ್ಲಿ ತರಗತಿ ನಡೆಸಲಾಗುತ್ತಿದೆ. ಶಾಲೆಗೆ ಕಿನ್ಯಾ ಪಿಡಿಒ, ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.

- Advertisement -
spot_img

Latest News

error: Content is protected !!