Tuesday, April 23, 2024
Homeತಾಜಾ ಸುದ್ದಿರಾಖಿ ಸಾವಂತ್ ಮನಗೆದ್ದ ಮೈಸೂರಿನ ಹುಡುಗ: ಸಾಂಸ್ಕೃತಿಕ ನಗರಿಯ ಆದಿಲ್ ಈಗ ರಾಖಿ ಬಾಯ್ ಫ್ರೆಂಡ್

ರಾಖಿ ಸಾವಂತ್ ಮನಗೆದ್ದ ಮೈಸೂರಿನ ಹುಡುಗ: ಸಾಂಸ್ಕೃತಿಕ ನಗರಿಯ ಆದಿಲ್ ಈಗ ರಾಖಿ ಬಾಯ್ ಫ್ರೆಂಡ್

spot_img
- Advertisement -
- Advertisement -

ಮುಂಬೈ: ಮದುವೆ ವಿಚಾರದಲ್ಲಿ ಬಾಲಿವುಡ್ ನಟಿ ಕಾಂಟ್ರವರ್ಸಿ ರಾಣಿ ರಾಖಿ ಸಾವಂತ್ ಮಾಡಿಕೊಂಡಿರುವ ಯಡವಟ್ಟು ಒಂದೆರಡಲ್ಲ. ಇದೀಗ ತನ್ನ ಬಾಯ್ ಫ್ರೆಂಡ್ ಬಗ್ಗೆ ರಾಖಿ ಹೊಸ ಬಾಂಬ್ ಸಿಡಿಸಿದ್ದಾರೆ.

ಇತ್ತೀಚೆಗಷ್ಟೇ ಪತಿಯಿಂದ ದೂರವಾಗಿದ್ದೇನೆ ಎಂದು ಹೇಳಿಕೆ ನೀಡಿದ್ದ ಬಾಲಿವುಡ್​​ ನಟಿ ರಾಖಿ ಸಾವಂತ್​ ಈಗ ತನ್ನ ಹೊಸ ಬಾಯ್​ಫ್ರೆಂಡನ್ನು ಪರಿಚಯಿಸಿದ್ದಾರೆ.ತನ್ನ ಬಾಯ್​ಫ್ರೆಂಡ್​ ಮೈಸೂರಿನವನೆಂದು ಸ್ವತಃ ರಾಖಿಯೇ ಇಬ್ಬರು ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಪರಿಚಯಿಸಿದ್ದಾರೆ. ಆತನ ಹೆಸರು ಆದಿಲ್​ ಎಂದು ರಾಖಿ ಹೇಳಿದ್ದಾರೆ.

ಇನ್ನು  ಹೊಸ ಬಾಯ್​ ಫ್ರೆಂಡ್​ ಹುಡುಕಿಕೊಂಡಿರುವ ರಾಖಿ, ಆತನಿಂದ ದುಬಾರಿ ಬೆಲೆಯ ಬಿಎಂಡಬ್ಲ್ಯೂ ಕಾರು ಉಡುಗೊರೆಯಾಗಿ ಪಡೆದಿದ್ದು, ಆತ ನನ್ನ ಜೀವನದ ಕೊನೆವರೆಗೂ ಜೊತೆಯಲ್ಲಿರುತ್ತೇನೆ ಎಂದು ಹೇಳಿದ್ದಾನೆ. ಹಾಗಾಗಿ ನಾನು ಉಡುಗೊರೆ ಪಡೆದಿದ್ದೇನೆ ಎಂದು ರಾಖಿ ಹೇಳಿಕೊಂಡಿದ್ದಾರೆ. ರಾಖಿಗೆ ಮದುವೆ, ಬಾಯ್​ಫ್ರೆಂಡ್​ ವಿಚಾರಗಳೇನೂ ಹೊಸತೇನಲ್ಲ. ಇದು ಎಷ್ಟು ದಿನ ಸಾಗುತ್ತೆ ಅನ್ನೋದು ನೋಡಬೇಕೆಂದು ಕಾದುನೋಡಬೇಕಿದೆ. 

- Advertisement -
spot_img

Latest News

error: Content is protected !!