Saturday, May 18, 2024
Homeಕೊಡಗುಉಚಿತ ವಿದ್ಯುತ್ ನೀಡದ ಹಿನ್ನೆಲೆ : ಮಡಿಕೇರಿಯಲ್ಲಿ ಚೆಸ್ಕಾಂ ಕಚೇರಿಗೆ ಕಾಫಿ ಬೆಳೆಗಾರರ ಮುತ್ತಿಗೆ

ಉಚಿತ ವಿದ್ಯುತ್ ನೀಡದ ಹಿನ್ನೆಲೆ : ಮಡಿಕೇರಿಯಲ್ಲಿ ಚೆಸ್ಕಾಂ ಕಚೇರಿಗೆ ಕಾಫಿ ಬೆಳೆಗಾರರ ಮುತ್ತಿಗೆ

spot_img
- Advertisement -
- Advertisement -

ಮಡಿಕೇರಿ: ಚೆಸ್ಕಾಂ‌ ಕಚೇರಿಗೆ ಕೊಡಗಿನ ಕಾಫಿ ಬೆಳೆಗಾರರು ಮುತ್ತಿಗೆ ಹಾಕಿದ್ದಾರೆ. ‌10 ಹೆಚ್ ಪಿ ವರೆಗಿನ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ನೀಡದ ಹಿನ್ನೆಲೆಯಲ್ಲಿ ಮಡಿಕೇರಿ ನಗರದಲ್ಲಿರುವ ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗಿದೆ.

ರಾಜ್ಯ ಸರ್ಕಾರದ ವಿರುದ್ಧ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದು, ಬೇರೆ ಜಿಲ್ಲೆಗಳಲ್ಲಿ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು ಕೊಡಗು ಜಿಲ್ಲೆಗೆ ಮಾತ್ರ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಉಚಿತ ವಿದ್ಯುತ್ ಭರವಸೆ ನೀಡಿದ್ದರೂ, ಚೆಸ್ಕಾಂ‌ ಮಾತ್ರ ವಿದ್ಯುತ್ ನೀಡುತ್ತಿಲ್ಲ ಎಂದು
ಚೆಸ್ಕಾಂ ವಿರುದ್ಧ ಕಾಫಿ ಬೆಳೆಗಾರರ ಆಕ್ರೋಶ ವ್ಯಕ್ತವಾಗಿದೆ.

ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಅಶೋಕ್ ಗೆ ಮುತ್ತಿಗೆ ಹಾಕಿರುವ ರೈತರು,
ಅಧಿಕಾರಿ ಕಚೇರಿ ಒಳ ಪ್ರವೇಶಿಸಲು ನಿರ್ಬಂಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮೈಸೂರಿನಿಂದ ಮುಖ್ಯ ಅಧಿಕಾರಿ ಮಡಿಕೇರಿಗೆ ಬರುವಂತೆ ರೈತರು ಆಗ್ರಹ ಮಾಡಿದ್ದಾರೆ.

- Advertisement -
spot_img

Latest News

error: Content is protected !!