Thursday, June 4, 2026
Homeಕರಾವಳಿಕಾಸರಗೋಡು: ನೇಣು ಬಿಗಿದು ಬಾಲಕಿ ಸಾವು- ಮೇಲ್ಪರಂಬ ಠಾಣೆಯಲ್ಲಿ ಪ್ರಕರಣ ದಾಖಲು

ಕಾಸರಗೋಡು: ನೇಣು ಬಿಗಿದು ಬಾಲಕಿ ಸಾವು- ಮೇಲ್ಪರಂಬ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಕಾಕಾಸರಗೋಡು: ಬಾಲಕಿಯೋರ್ವಳು ನೇಣು ಬಿಗಿದು ಸಾವನ್ನಪ್ಪಿದ ಘಟನೆ ಮೇಲ್ಪರಂಬದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಮೇಲ್ಪರಂಬ ಕಡೆಂಗೋಡಿನ ಅಬ್ದುಲ್ ರಹಮಾನ್ ರವರ ಪುತ್ರಿ ಶಾಹಿನಾ (11) ಎಂದು ತಿಳಿಸಲಾಗಿದೆ.

ಬಾಲಕಿ ಮೊಬೈಲ್ ಗೇಮ್ ಆಡುತ್ತಿದ್ದುದನ್ನು ಗಮನಿಸಿದ್ದ ತಾಯಿ ಮೊಬೈಲ್ ಕಿತ್ತು ಕೊಂಡಿದ್ದರು ಎನ್ನಲಾಗಿದೆ. ಇದಾದ ಬಳಿಕ ರಾತ್ರಿ ಕಿಟಕಿಗೆ ಚೂಡಿದಾರ್ ಶಾಲಿನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇದನ್ನು ಗಮನಿಸಿದ ಮನೆಯವರು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.

ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಾಗುವುದು. ಈ ಬಗ್ಗೆ ಮೇಲ್ಪರಂಬ ಠಾಣಾ ಪೊಲೀಸರು ಅಸಹಜ ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!