Thursday, June 4, 2026
Homeಚಿಕ್ಕಮಗಳೂರುಕೊನೆಗೂ ಶಿವರಾಜ್ ಕುಮಾರ್ ಹಾಗೂ ಅನುಶ್ರೀ ಅವರನ್ನು ಭೇಟಿ ಮಾಡಿದ ಕಾಫಿನಾಡು ಚಂದು

ಕೊನೆಗೂ ಶಿವರಾಜ್ ಕುಮಾರ್ ಹಾಗೂ ಅನುಶ್ರೀ ಅವರನ್ನು ಭೇಟಿ ಮಾಡಿದ ಕಾಫಿನಾಡು ಚಂದು

- Advertisement -
- Advertisement -

ಬೆಂಗಳೂರು: ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಬೇಕು ಎಂಬ ಕಾಫಿನಾಡು ಚಂದು ಅವರ ಕನಸು ಕೊನೆಗೂ ಈಡೇರಿದೆ.  ಕೊನೆಗೂ ಶಿವಣ್ಣ ಅವರನ್ನ ಭೇಟಿಯಾಗಿ ತಮ್ಮ ಮಹಾದಾಸೆಯನ್ನ ಈಡೇರಿಸಿಕೊಂಡಿದ್ದಾರೆ. ಈ ಕುರಿತ ವೀಡಿಯೋವೊಂದನ್ನ ಕಾಫಿನಾಡು ಚಂದು ಶೇರ್ ಮಾಡಿದ್ದಾರೆ.

ಬರ್ತ್ಡೇ ಸಾಂಗ್ ಹೇಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿರುವ ಸ್ಟಾರ್ ಅಂದ್ರೆ ಕಾಫಿನಾಡು ಚಂದು. ತನ್ನ ಪ್ರತಿ ವೀಡಿಯೋದಲ್ಲೂ ತಾನು ಶಿವಣ್ಣ ಮತ್ತು ಪುನೀತ್ ಅವರ ಅಭಿಮಾನಿ ಎಂದು ಹೇಳಿಯೇ ಬರ್ತ್ಡೇ ಸಾಂಗ್ ಅನ್ನು ಹೇಳುತ್ತಿದ್ದರು. ಜತೆಗೆ ಸಾಕಷ್ಟು ಬಾರಿ ತಾವು ಶಿವಣ್ಣ ಅವರನ್ನ ಭೇಟಿಯಾಗಬೇಕು ಎಂದು ಹೇಳಿಕೊಂಡಿದ್ದರು. ಈಗ ಆ ಆಸೆ ನೆರವೇರಿದೆ.

ಖಾಸಗಿ ಚಾನೆಲ್‌ನಲ್ಲಿ ಜಡ್ಜ್ ಆಗಿರುವ ಶಿವರಾಜ್‌ಕುಮಾರ್ ಅವರನ್ನ ಸೆಟ್‌ನಲ್ಲೇ ಭೇಟಿ ಮಾಡಿ, ಸ್ಜೇಜ್ ಮೇಲೆ ಹಾಡಿದ್ದಾರೆ. ಈ ವೀಡಿಯೋ ಕೂಡ ಚಂದು ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ, ನಿರೂಪಕಿ ಅನುಶ್ರೀ ಅವರನ್ನ ಕೂಡ ಕಾಫಿನಾಡು ಚಂದು ಭೇಟಿ ಮಾಡಿದ್ದಾರೆ. ಈ ಕುರಿತ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

- Advertisement -

Latest News

error: Content is protected !!