Wednesday, June 3, 2026
Homeತಾಜಾ ಸುದ್ದಿಬೆಂಗಳೂರಿನಲ್ಲಿ ಇಂದು ಸಿಎಂ ಸುದ್ದಿಗೋಷ್ಟಿ ; ಉದ್ದೇಶಿತ ಯೋಜನೆಗಳ ಘೋಷಣೆ ಮಾಡಲಿರುವ ಸಿಎಂ ಬೊಮ್ಮಾಯಿ

ಬೆಂಗಳೂರಿನಲ್ಲಿ ಇಂದು ಸಿಎಂ ಸುದ್ದಿಗೋಷ್ಟಿ ; ಉದ್ದೇಶಿತ ಯೋಜನೆಗಳ ಘೋಷಣೆ ಮಾಡಲಿರುವ ಸಿಎಂ ಬೊಮ್ಮಾಯಿ

- Advertisement -
- Advertisement -

ಬೆಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆಯ ಕಾರಣ ಬಸವರಾಜ ಬೊಮ್ಮಾಯಿ ಸರ್ಕಾರದ ಒಂದು ವರ್ಷ ಪೂರ್ಣ ಆಚರಣೆಯ ಜನೋತ್ಸವ ಸಾಧನಾ ಸಮಾವೇಶ ರದ್ದುಗೊಂಡಿರುವ ಹಿನ್ನೆಲೆಯಲ್ಲಿ ಇಂದು ನಿಗದಿಯಾಗಿದ್ದ ಎಲ್ಲಾ‌ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗದೆ.

ವಿಧಾನಸೌಧದ ಬ್ಯಾಂಕ್ ವೆಟ್ ಹಾಲ್ ನಲ್ಲಿ ರಾಜ್ಯ ಸರ್ಕಾರದ ವತಿಯಿಂದ ‌ನಿಗದಿಯಾಗಿದ್ದ ನಾಲ್ಕು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಕೂಡಾ ರದ್ದಾಗಿದ್ದು, ಸಿಎಂ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಮಾತ್ರ ನಡೆಸಿ ಉದ್ದೇಶಿತ ಯೋಜನೆಗಳ ಘೋಷಣೆ ಮಾತ್ರ ಮಾಡಲಿದ್ದಾರೆ.

ಇಂದು ಬೆಳಗ್ಗೆ ಹತ್ತು ಗಂಟೆಯ ಬಳಿಕ ವಿಧಾನಸೌಧದಲ್ಲಿ ಸಿಎಂ ಸುದ್ದಿಗೋಷ್ಟಿ ನಡೆಸಲಿದ್ದು, ಹಿಂದುಳಿದ ವರ್ಗ, ಎಸ್ ಸಿ, ಎಸ್ ಟಿ ಸೇರಿದಂತೆ ವಿವಿಧ ವರ್ಗಗಳಿಗೆ ಕೆಲವು ಯೋಜನೆಗಳನ್ನು ಘೋಷಣೆ ಮಾಡಲಿದ್ದಾರೆ.

ಹೀಗಾಗಿ ಒಂದು ವರ್ಷದ ಆಚರಣೆ ಕುರಿತ ಕಾರ್ಯಕ್ರಮಗಳು ಸುದ್ದಿಗೋಷ್ಟಿಗೆ ಮಾತ್ರ ಸೀಮಿತವಾಗಿರಲಿದೆ.

- Advertisement -

Latest News

error: Content is protected !!