Thursday, June 4, 2026
Homeಕರಾವಳಿಹರೀಶ್ ಪೂಂಜ ಇನ್ನೂ ಬಚ್ಛಾ, ಕಾರ್ಕಳ ಪರಶುರಾ‌ಮ ಪ್ರತಿಮೆ ಕುರಿತು ತನಿಖೆ; ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ...

ಹರೀಶ್ ಪೂಂಜ ಇನ್ನೂ ಬಚ್ಛಾ, ಕಾರ್ಕಳ ಪರಶುರಾ‌ಮ ಪ್ರತಿಮೆ ಕುರಿತು ತನಿಖೆ; ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

- Advertisement -
- Advertisement -

ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರಾಜಕೀಯದಲ್ಲಿ ಇನ್ನೂ ಬಚ್ಚಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಂದು ಮಾತನಾಡಿದ ಸಿಎಂ,
ಸಿದ್ದರಾಮಯ್ಯ ಬಗ್ಗೆ ಹರೀಶ್ ಪೂಂಜಾ ಫೇಸ್ ಬುಕ್ ಪೇಜ್ ನಲ್ಲಿ ಕಲೆಕ್ಷನ್ ಮಾಸ್ಟರ್ ಎಂಬ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದಾರೆ.

ನಾನು 1983ರಿಂದ ಶಾಸಕನಾಗಿ 1985ರಲ್ಲೇ ಮಂತ್ರಿ ಆಗಿದ್ದವನು ಯಾರೂ ನನ್ನನ್ನು ಅವತ್ತು ಈ ರೀತಿ ಕರೆದಿರಲಿಲ್ಲ ಎಂದು ಹೇಳಿರುವ ಸಿದ್ದರಾಮಯ್ಯ, ಹರೀಶ್ ಪೂಂಜ ಶಾಸಕನಾಗಿರುವುದು ಮೊನ್ನೆ ಇವರು ಪಾಪ ಇನ್ನೂ ರಾಜಕೀಯದಲ್ಲಿ ಬಚ್ಚಾ ಎಂದು ವ್ಯಂಗ್ಯವಾಡಿದ್ದಾರೆ.

ಹರೀಶ್ ಪೂಂಜ ಈ ಮಾತನ್ನು ಹಿಂದಿನ ಬಿಜೆಪಿ ಸರ್ಕಾರ ಮತ್ತು ಬಿಜೆಪಿ ಮುಖ್ಯಮಂತ್ರಿಗಳಿಗೆ ಹೇಳಲಿ ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ, ಕಾರ್ಕಳದ ಪರಶುರಾಮ ಮೂರ್ತಿ ಅಸಲಿನಾ ಅಥವಾ ನಕಲಿನಾ ಎಂಬುದು ತನಿಖೆ ಆಗಲಿದೆ ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!