Friday, June 5, 2026
Homeಕರಾವಳಿಉಡುಪಿಸಿಎಂ, ಹೋಮ್ ಮಿನಿಸ್ಟರ್ ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ: ಸಚಿವ ಕೋಟ ಶ್ರೀನಿವಾಸ್‌

ಸಿಎಂ, ಹೋಮ್ ಮಿನಿಸ್ಟರ್ ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ: ಸಚಿವ ಕೋಟ ಶ್ರೀನಿವಾಸ್‌

- Advertisement -
- Advertisement -

ಉಡುಪಿ: ಬೊಮ್ಮಾಯಿಯವರು ಸಮರ್ಥವಾಗಿ ಆಡಳಿತ ನಿರ್ವಹಿಸುತ್ತಿದ್ದಾರೆ.ರಾಜ್ಯದ ಜನ ನೆಮ್ಮದಿಯಿಂದ ಇದ್ದಾರೆ ಎಂಬ ವಿಶ್ವಾಸ ನಮ್ಮದು ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಚಿವರು, ಮೊನ್ನೆ ಮುಗಿದ ವಿಧಾನಸಭೆ, ವಿಧಾನಪರಿಷತ್ ಕಲಾಪದಲ್ಲಿ ಸಿದ್ಧರಾಮಯ್ಯನವರು ಮತ್ತು ವಿಪಕ್ಷದವರು ಏನೆಲ್ಲ ಗದ್ದಲ ಮಾಡಿದರು.ಆದರೆ ಮುಖ್ಯಮಂತ್ರಿಗಳು ಅವರಿಗೆ ಅತ್ಯಂತ ಸೂಕ್ತ ಉತ್ತರ ಕೊಟ್ಟಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಮೌನವಾಗಿದ್ದಾರೆ ,ಗೃಹ ಮಂತ್ರಿಗಳು ಕೆಲಸ ಮಾಡುತ್ತಿಲ್ಲ ಎಂದು ಹೇಳುವುದನ್ನು ಕೇಳಿದ್ದೇನೆ. ಗೃಹ ಮಂತ್ರಿಗಳು ತಮ್ಮ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ವಿರೋಧ ಪಕ್ಷಗಳು ಸರಕಾರವನ್ನು ಟೀಕಿಸುವುದು ಸಹಜ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!