Saturday, May 4, 2024
Homeತಾಜಾ ಸುದ್ದಿ1 ಲಕ್ಷ ಮೀನುಗಾರರ ಕುಟುಂಬದ ಮಕ್ಕಳಿಗೆ ಸ್ಕಾಲರ್​ಶಿಪ್​ ಘೋಷಿಸಿದ ಸಿಎಂ ಬೊಮ್ಮಾಯಿ

1 ಲಕ್ಷ ಮೀನುಗಾರರ ಕುಟುಂಬದ ಮಕ್ಕಳಿಗೆ ಸ್ಕಾಲರ್​ಶಿಪ್​ ಘೋಷಿಸಿದ ಸಿಎಂ ಬೊಮ್ಮಾಯಿ

spot_img
- Advertisement -
- Advertisement -

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ, 1 ಲಕ್ಷ ಮೀನುಗಾರರ ಕುಟುಂಬದ ಮಕ್ಕಳಿಗೆ ಸ್ಕಾಲರ್​ಶಿಪ್​ ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಒಳನಾಡು ಮೀನುಗಾರಿಕೆ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಸ್ಕಾಲರ್​ಶಿಪ್ ಘೋಷಣೆ ಮಾಡಿದ್ದಾರೆ. ಸಮಾವೇಶದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಒಳನಾಡು ಮೀನುಗಾರಿಕೆಗೆ ಬಹಳ ಪ್ರಾಮುಖ್ಯತೆ ಇದೆ. ಸಮುದ್ರ ಮೀನಿನ ಕೃಷಿಗೆ ಪ್ರೋತ್ಸಾಹಧನ ಕೊಡುತ್ತಿದ್ದೇವೆ. 100 ಹೊಸ ಡೀಫ್​ ಸೀ ಫಿಶಿಂಗ್ ಬೋಟ್​ ಕೊಡುತ್ತಿದ್ದೇವೆ. 1,600 ಕೆರೆಗಳಲ್ಲಿ ಮೀನು ಉತ್ಪಾದನೆ ಮಾಡುವ ಗುರಿ ಇದೆ. ಈ ಹಿಂದೆ 300 ಮೀನುಗಾರರ ಸಂಘಕ್ಕೆ ನೆರವು ನೀಡಲಾಗಿತ್ತು. ಈಗ ಸಾವಿರ ಮೀನುಗಾರರ ಸಂಘಗಳಿಗೆ ಸಹಾಯಧನ ವಿಸ್ತರಣೆ ಮಾಡಲಾಗಿದೆ. 3 ಲಕ್ಷದಿಂದ 5 ಲಕ್ಷದವರೆಗೂ ಸರ್ಕಾರ ಸಹಾಯಧನ ನೀಡಲಿದೆ. ಆರ್ಥಿಕವಾಗಿ ಮೀನುಗಾರರು ಸಬಲರಾಗಬೇಕು ಎಂದರು.

- Advertisement -
spot_img

Latest News

error: Content is protected !!