Wednesday, June 24, 2026
Homeತಾಜಾ ಸುದ್ದಿಸಚಿವ ಸುಧಾಕರ್ ಮನೆ ಮುಂದೆಯೇ ಗನ್ ಮ್ಯಾನ್ - ಡ್ರೈವರ್ ನಡುವೆ ಹೊಡೆದಾಟ.. ಬಿಡಿಸಲು ಪೋಲೀಸರ...

ಸಚಿವ ಸುಧಾಕರ್ ಮನೆ ಮುಂದೆಯೇ ಗನ್ ಮ್ಯಾನ್ – ಡ್ರೈವರ್ ನಡುವೆ ಹೊಡೆದಾಟ.. ಬಿಡಿಸಲು ಪೋಲೀಸರ ಪರದಾಟ..

- Advertisement -
- Advertisement -

ಬೆಂಗಳೂರು: ಸದಾಶಿವನಗರದಲ್ಲಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಮನೆ ಎದುರು ಚಾಲಕ ಸೋಮಶೇಖರ್ ಮೇಲೆ ಗನ್ ಮ್ಯಾನ್ ತಿಮ್ಮಯ್ಯ ಹಲ್ಲೆ ಮಾಡಿದ್ದಾರೆ.

ಸಚಿವರ ಮನೆ ಎದುರು ನಡುರಸ್ತೆಯಲ್ಲೇ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಸುಧಾಕರ್ ಗನ್ ಮ್ಯಾನ್ ಮತ್ತು ಖಾಸಗಿ ಚಾಲಕ ಸೋಮಶೇಖರ್ ರಸ್ತೆಯಲ್ಲಿ ಹೊರಳಾಡಿಕೊಂಡು ಗಲಾಟೆ ಮಾಡುತ್ತಿದ್ದರೆ, ಸ್ಥಳದಲ್ಲಿದ್ದ ಪೊಲೀಸರು ಹರಸಾಹಸ ಪಡಬೇಕಾಯಿತು. ಈ ವೇಳೆ ಹೆಚ್ಚು ಕಡಿಮೆಯಾಗಿ ಗನ್ ಮ್ಯಾನ್ ಬಳಿ ಇದ್ದ ಗನ್ ನಿಂದ ಗುಂಡು ಹಾರಿದ್ದರೆ ಅಪಾಯವಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ.

ಗನ್‌ಮ್ಯಾನ್ ತಿಮ್ಮಯ್ಯ ಅವರು ಗುರುವಾರ ಅಂಗವಿಕಲನಿಗೆ ಹೊಡೆದಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಈ ವಿಚಾರವನ್ನು ಸಚಿವ ಡಾ ಕೆ ಸುಧಾಕರ್‌ ಅವರಿಗೆ ಡ್ರೈವರ್ ಸೋಮಶೇಖರ್ ತಿಳಿಸಿದ್ದಾರೆ ಎಂದು ಆಕ್ರೋಶಗೊಂಡ ಗನ್ ಮ್ಯಾನ್ ತಿಮ್ಮಯ್ಯ ಸಚಿವರ ಖಾಸಗಿ ಡ್ರೈವರ್‌ ಸೋಮಶೇಖರ್‌ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!