Saturday, June 28, 2025
Homeತಾಜಾ ಸುದ್ದಿಸಿನಿಮಾ, ಧಾರಾವಾಹಿಗಳಲ್ಲಿ ಛಾನ್ಸ್ ಕೊಡಿಸುವುದಾಗಿ 50ಕ್ಕೂ ಹೆಚ್ಚು ಮಹಿಳೆಯರಿಗೆ ವಂಚನೆ

ಸಿನಿಮಾ, ಧಾರಾವಾಹಿಗಳಲ್ಲಿ ಛಾನ್ಸ್ ಕೊಡಿಸುವುದಾಗಿ 50ಕ್ಕೂ ಹೆಚ್ಚು ಮಹಿಳೆಯರಿಗೆ ವಂಚನೆ

spot_img
- Advertisement -
- Advertisement -

ಮೈಸೂರು: ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸೋದಕ್ಕೆ ಛಾನ್ಸ್ ಕೊಡಿಸುವುದಾಗಿ ಹೇಳಿ ವ್ಯಕ್ತಿಯೊಬ್ಬ 50ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿರೋದು ಇದೀಗ ಬಯಲಾಗಿದೆ. ಗಿರೀಶ್ ಅಲಿಯಾಸ್ ಸಿನಿಮಾ ಗಿರೀಶ್ ವಂಚನೆ ಮಾಡಿದ ವ್ಯಕ್ತಿ. ಈತ ಮೈಸೂರಿನ ಗುರುಕಾರ್ ರೇವಣ್ಣ ರಸ್ತೆಯ ನಿವಾಸಿ.

ಮಹಿಳೆಯರಿಗೆ ಸಿನಿಮಾ, ಧಾರಾವಾಹಿಗಳಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ನಂಬಿಸಿ ಹಣ ಪಡೆದು ವಂಚಿಸಿದ್ದಾನೆ. ಸಿನಿಮಾ, ಧಾರಾವಾಹಿಯಲ್ಲಿ ಮಿಂಚಬೇಕು ಎನ್ನುವ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದನು.ಮಹಿಳೆಯರಿಂದ ಹಣ ಪಡೆಯುವುದನ್ನು ತಾನೇ ಸ್ವತಃ ವಿಡಿಯೋ ಮಾಡುವ ಮೂಲಕ ಮಹಿಳೆಯನ್ನು ನಂಬಿಸುತ್ತಿದ್ದನು. ವಂಚನೆ ಮಾತ್ರವಲ್ಲದೇ ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೂಡ ನೀಡಿದ್ದಾನೆ.

ಮೊದಲು ಸಿನಿಮಾ, ಧಾರಾವಾಹಿಗಾಗಿ ಕಲಾವಿದರು ಬೇಕು ಎಂದು ಜಾಹೀರಾತು ನೀಡುತ್ತಾನೆ. ಈ ಜಾಹೀರಾತು ನೋಡಿ ಈತನನ್ನು ಭೇಟಿ ಮಾಡಿದವರಿಗೆ ತಾನೇ ಕಥೆ ಹೇಳಿ ಯಾಮಾರಿಸುತ್ತಾನೆ. ಕೆಲವರಿಗೆ ತಾನು ಪೊಲೀಸ್ ಎಂದು ಕೂಡ ಸುಳ್ಳು ಹೇಳಿದ್ದಾನೆ. ಹೀಗೆ ಸುಳ್ಳು ಹೇಳಿ ಬರೋಬ್ಬರಿ 50ಕ್ಕೂ ಹೆಚ್ಚಿನ ಮಹಿಳೆಯರಿಗೆ ಮೋಸ ಮಾಡಿದ್ದಾನೆ.

- Advertisement -
spot_img

Latest News

error: Content is protected !!