Thursday, June 4, 2026
Homeತಾಜಾ ಸುದ್ದಿನಟಿ ರಾಗಿಣಿಯ ಜಾಮೀನು ಪಡೆಯಲು ಹಣವಿಲ್ಲದೇ ಪರದಾಡುತ್ತಿರುವ ಪೋಷಕರು !

ನಟಿ ರಾಗಿಣಿಯ ಜಾಮೀನು ಪಡೆಯಲು ಹಣವಿಲ್ಲದೇ ಪರದಾಡುತ್ತಿರುವ ಪೋಷಕರು !

- Advertisement -
- Advertisement -

ಬೆಂಗಳೂರು: ಡ್ರಗ್ಸ್ ಜಾಲದೊಂದಿಗೆ ನಂಟು ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ರಾಗಿಣಿ ದ್ವಿವೇದಿಗೆ ಜಾಮೀನು ಪಡೆಯಲು ಹಣವಿಲ್ಲದೇ ರಾಗಿಣಿ ಪೋಷಕರು ಪರದಾಡುತ್ತಿದ್ದಾರೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.

ಈ ಹಿಂದೆಯೇ ರಾಗಿಣಿ ಪೋಷಕರು, ವಕೀಲರಿಗೆ ಫೀಸ್​ ಕೊಡುವ ಸಲುವಾಗಿ, ಹಣವಿಲ್ಲದೇ ತಾವು ವಾಸವಿದ್ದ ಫ್ಲಾಟ್​ ಮಾರಲು ಮುಂದಾಗಿದ್ದರು. ಆದ್ರೆ, ಫ್ಲಾಟ್​ ಮಾರಟಕ್ಕಿಟ್ಟು ಒಂದು ತಿಂಗಳಾದ್ರು, ಇನ್ನೂ ಸೇಲ್​ ಆಗಿಲ್ಲ. ಫ್ಲಾಟ್​ ಸೇಲಾಗದ ಹಿನ್ನಲೆ ಮನೆಯಲ್ಲಿರುವ ರಾಗಿಣಿ ಒಡವೆಗಳನ್ನ ಮಾರಲು ಅವರ ತಾಯಿ ಮುಂದಾಗಿದ್ದಾರೆ ಎನ್ನಲಾಗಿದೆ.

ಇನ್ನೊಂದು ಕಡೆ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ ಅಕ್ಟೋಬರ್ 23ರವರೆಗೆ ವಿಸ್ತರಣೆ ಕೋರ್ಟ್ ಆದೇಶ ಹೊರಡಿಸಿದೆ. ಎನ್ ಡಿ ಪಿ ಎಸ್ ವಿಶೇಷ ಕೋರ್ಟ್ ನಲ್ಲಿ ಜಾಮೀನು ಸಿಗದೇ ಇದ್ದ ಕಾರಣ ರಾಗಿಣಿ ಹಾಗೂ ಸಂಜನಾ ಪರ ವಕೀಲರು ಜಾಮೀನಿಗಾಗಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!