Saturday, June 6, 2026
Homeತಾಜಾ ಸುದ್ದಿಎರಡು ವರ್ಷ ತಾಯಿಯ ಮೃತ ದೇಹದೊಡನೆ ಬದುಕು ಸಾಗಿಸಿದ ಮಕ್ಕಳು!…ಘೋರ ಘಟನೆ ಬೆಳೆಕಿಗೆ ಬಂದಿದ್ದು ಹೇಗೆ?

ಎರಡು ವರ್ಷ ತಾಯಿಯ ಮೃತ ದೇಹದೊಡನೆ ಬದುಕು ಸಾಗಿಸಿದ ಮಕ್ಕಳು!…ಘೋರ ಘಟನೆ ಬೆಳೆಕಿಗೆ ಬಂದಿದ್ದು ಹೇಗೆ?

- Advertisement -
- Advertisement -

ಟನ್ನೆಸ್ಸಿ: ಮಹಿಳೆ ಸಾವನ್ನಪ್ಪಿ ಎರಡು ವರ್ಷ ಕಳೆದರೂ ಮಕ್ಕಳು ಆಕೆಯ ದೇಹಕ್ಕೆ ಅಂತ್ಯಕ್ರಿಯೆ ಮಾಡದೇ ಆಕೆಯ ಕೋಣೆಯಲ್ಲೇ ಮೃತದೇಹವನ್ನಿಟ್ಟ ಘೋರ ಘಟನೆಯೊಂದು ಅಮೆರಿಕದ ಟನ್ನೆಸ್ಸಿ ಎಂಬಲ್ಲಿ ಬೆಳಕಿಗೆ ಬಂದಿದೆ.ಲಾರಿಂಡಾ ಜಾಲಿ ಎಂಬ ಮಹಿಳೆ ಎರಡು ವರ್ಷದ ಹಿಂದೆ ಸತ್ತು ಹೋಗಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಮಹಿಳೆಯ ಶವ ಈಗ ಬೆಳೆಕಿಗೆ ಬಂದಿದೆ.

ಈಕೆ ಸತ್ತು ವರ್ಷಗಳೇ ಕಳೆದಿದ್ದು ಈಗ ಮೃತದೇಹ ಪತ್ತೆ ಮಾಡಲಾಗಿದೆ. ಆಕೆಯ ಕೊಳೆತ ದೇಹ ಆಕೆಯ ಹಾಸಿಗೆಯ ಬಟ್ಟೆಯ ರಾಶಿಗಳ ನಡುವೆ ದೊರೆತಿದೆ.ಮೃತ ಲಾರಿಂಡಾ ಸಹೋದರ ಆಂಟನಿ ಜಾಲಿ ಆಕೆ ಸತ್ತು ಎರಡಲ್ಲ ಬದಲಾಗಿ ಅದಕ್ಕೂ ಹೆಚ್ಚು ವರ್ಷಗಳೇ ಕಳೆದಿದೆ. ಈ ಬಗ್ಗೆ ಆಕೆಯ ಮಗಳನ್ನ ಕರೆದು ಕೇಳಿದಾಗ ನನಗೆ ಅವಳು ತಾಯಿ 2017ರಲ್ಲೇ ಸತ್ತಿದ್ದರು ಎಂದು ಹೇಳಿದ್ದಳು. ಈ ವಿಚಾರ ಕೇಳಿ ನಾನೇ ಆಘಾತಕ್ಕೊಳಗಾದೆ ಎಂದು ಹೇಳಿದ್ದಾರೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.

- Advertisement -

Latest News

error: Content is protected !!