ಬೆಳ್ತಂಗಡಿ; ದ.ಕ.ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಗಡಿ ಭಾಗದಲ್ಲಿರುವ ಬಂಡಾಜೆಯ ಅಬ್ಬಿ ಜಲಪಾತ ವೀಕ್ಷಣೆಗಾಗಿ ಬೆಂಗಳೂರಿನಿಂದ 17 ಮಂದಿ ಸದಸ್ಯರ ಕುಟುಂಬವೊಂದು ಬಂದಿತ್ತು. ಈ ತಂಡದಲ್ಲಿದ್ದ ಐದು ವರ್ಷದ ಮಗುವೊಂದು ಬಿದ್ದು ಮುಖ ಮತ್ತು ತಲೆಗೆ ಗಂಭೀರ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಶ್ರೇಯಾ ಗಾಯಗೊಂಡ ಬಾಲಕಿ. ಚಾರಣಿಗರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಬಾಳೂರು ಬಳ್ಳಾಲರಾಯನದುರ್ಗ ಕಡೆಯಿಂದ ಅಬ್ಬಿ ಜಲಪಾತದ ಕಡೆಗೆ ಬಂದಿದ್ದರು. ಈ ವೇಳೆ ಜೊತೆಯಲ್ಲಿದ್ದ ಐದು ವರ್ಷದ ಮಗು ಶ್ರೇಯಾ ಪಾಚಿಗಟ್ಟಿದ ಕಲ್ಲಿನ ಮೇಲೊಂದರಿಂದ ಅಲ್ಪ ಆಳಕ್ಕೆ ಜಾರಿ ಬಿದ್ದಿದ್ದಾಳೆ. ಈ ವೇಳೆ ಆಕೆಯ ಮುಖ, ತಲೆಗೆ ಹೆಚ್ಚಿನ ಗಾಯವಾದರೆ ಮೈ ಮೇಲೆ ತರಚಿದ ಗಾಯಗಳಾಗಿವೆ.

ತಕ್ಷಣ ಅವರನ್ನು ಕುಟುಂಬಿಕರೇ ರಕ್ಷಣೆ ಮಾಡಿ ಅತ್ತ ಬಾಳೂರು ಕಡೆಗೆ ಮರಳಿದ್ದಾರೆ .ಕಾಲ್ನಡಿಗೆ ದಾರಿ ಮೂಲಕ ತೆರಳಿ ನಂತರ ಮಗುವನ್ನು ತಮ್ಮ ವಾಹನದ ಮೂಲಕ ಆಸ್ಪತ್ರೆಗೆ ಕರೆದೊಯ್ಯುದಿದ್ದಾರೆ.ಬೆಳ್ತಂಗಡಿ ಅಗ್ನಿಶಾಮಕದಳ ಹಾಗೂ ಬೆಳ್ತಂಗಡಿ ಪೊಲೀಸರು ಹಾಗೂ ಇತರ ಸಿಬ್ಬಂದಿ ಸ್ಥಳಕ್ಕೆ ಹೋಗಿ ವಾಪಸ್ ಅಗಿದ್ದಾರೆ.



