Sunday, May 12, 2024
Homeಕರಾವಳಿಮಂಗಳೂರು:ಆಪಲ್ ಮೊಬೈಲ್ ಶೋರೂಂನಿಂದ ಕಳವು ಪ್ರಕರಣ : 41 ಮೊಬೈಲ್ ಸಹಿತ ಓರ್ವ ಆರೋಪಿ...

ಮಂಗಳೂರು:ಆಪಲ್ ಮೊಬೈಲ್ ಶೋರೂಂನಿಂದ ಕಳವು ಪ್ರಕರಣ : 41 ಮೊಬೈಲ್ ಸಹಿತ ಓರ್ವ ಆರೋಪಿ ಸೆರೆ!

spot_img
- Advertisement -
- Advertisement -

ಮಂಗಳೂರು: ನಗರದ ಆಪಲ್ ಮೊಬೈಲ್ ಶೋರೂಂ ಒಂದರಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣವನ್ನು ಬೇಧಿಸಿರುವ ಮಂಗಳೂರು ಪೊಲೀಸರು ಓರ್ವ ಆರೋಪಿ ಸಹಿತ ಕಳವಾದ 41 ಮೊಬೈಲ್‌ಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌, ಆರೋಪಿಯನ್ನು ಮುಂಬೈನಿಂದ ಬಂಧಿಸಲಾಗಿದ್ದು,ಈತನ ವಿರುದ್ಧ ಈ ಹಿಂದೆಯೇ ಮುಂಬೈನಲ್ಲಿ ಕಳವು ಸೇರಿದಂತೆ 9ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎಂದಿದ್ದಾರೆ.

ಕೃತ್ಯದಲ್ಲಿ ಇನ್ನೋರ್ವ ಭಾಗಿಯಾಗಿದ್ದು ಆತನನ್ನು ಕೂಡ ಬಂಧಿಸಲು ಪೊಲೀಸರು ಬಲೇ ಬೀಸಿದ್ದಾರೆ. ಮೊಬೈಲ್‌ ಶೋರೂಂನಿಂದ ಒಟ್ಟು 54 ಲ.ರೂ. ಮೌಲ್ಯದ 68 ಆಪಲ್ ಐಪೋನ್‌ ಕಂಪೆನಿಯ ಮೊಬೈಲ್‌ ಪೋನ್‌ಗಳು, 1,15,888 ರೂ.ನಗದು, ಸ್ಟೋರ್‌ ಸೇಫ್ಟಿ ಲಾಕರ್‌, ಸಿಸಿ ಕೆಮರಾ ಡಿವಿಆರ್‌ ಕಳವಾಗಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಸಿಸಿಬಿ ತಂಡ ಆರೋಪಿಗಳ ಪತ್ತೆಯಲ್ಲಿ ತಂಡದ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ತಂಡಕ್ಕೆ ಪ್ರೋತ್ಸಾಹ ಧನವಾಗಿ 10,000 ರೂ. ನಗದು ಬಹುಮಾನವನ್ನು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಈ ಸಂದರ್ಭ ಘೋಷಿಸಿದರು.

ಕಳ್ಳತನ ಮಾಡುವ ಸುಮಾರು 3 ದಿನಗಳ ಮೊದಲು ಮುಂಬೈನಿಂದ ನಗರಕ್ಕೆ ಆಗಮಿಸಿದ ಕಳ್ಳರು 5-6 ಮೊಬೈಲ್‌ ಅಂಗಡಿಗಳಿಗೆ ಭೇಟಿ ನೀಡಿದ್ದು,ಎಲ್ಲಿ ಭದ್ರತೆ ಸರಿಯಾಗಿಲ್ಲ ಹಾಗೂ ಎಲ್ಲಿ ಸುಲಭವಾಗಿ ಕಳ್ಳತನ ಮಾಡಬಹುದು ಎಂಬುದನ್ನು ಖಚಿತ ಪಡಿಸಿಕೊಂಡಿದ್ದರು.

ಗ್ರಾಹಕರ ಸೋಗಿನಲ್ಲಿ ಮೊಬೈಲ್‌ ಶೋರೂಂಗಳಿಗೆ ಹೋಗಿ ವಾಶ್‌ರೂಂ ಉಪಯೋಗಿಸುವ ನೆಪದಲ್ಲಿ ಒಳಗೆ ತಿರುಗಾಡಿ ಕಳ್ಳತನ ಮಾಡಲು ಸುಲಭ ದಾರಿ ಎಲ್ಲಿದೆ ಎಂಬುದನ್ನು ತಿಳಿದುಕೊಂಡು ಹೋಗಿದ್ದರು ಎನ್ನಲಾಗಿದೆ.ಅದರಂತೆ ಬಲ್ಮಠದ ಈ ಮೊಬೈಲ್‌ ಶೋರೂಂಗೆ ಬಂದು ನಿರ್ದಿಷ್ಟ ಸ್ಥಳವೊಂದರಲ್ಲಿ 2-3 ಸರಳುಗಳನ್ನು ಮಾತ್ರ ತುಂಡರಿಸುವ ಮೂಲಕ ಸುಲಭವಾಗಿ ಒಳಗೆ ಹೊಕ್ಕಿದ್ದಾರೆ.



ಇಷ್ಟು ದೊಡ್ಡ ಮೊಬೈಲ್‌ ಶೋರೂಂನಲ್ಲಿ ಸೈರನ್‌ ಸೇರಿದಂತೆ ಸೂಕ್ತ ಭದ್ರತಾ ವ್ಯವಸ್ಥೆಗಳು ಇರಲಿಲ್ಲ. 2-3 ವರ್ಷಗಳ ಹಿಂದೆ ಕೂಡ ಇದೇ ಶೋರೂಂನಲ್ಲಿ ಕಳ್ಳತನ ನಡೆದಿದ್ದರೂ ಮಾಲಕರು ನಿರ್ಲಕ್ಷ್ಯ ತೋರಿರುವುದು ಕಂಡುಬಂದಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಡಿಸಿಪಿಗಳಾದ ಹರಿರಾಂ ಶಂಕರ್‌ ಮತ್ತು ದಿನೇಶ್‌ ಕುಮಾರ್‌ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!