Monday, April 29, 2024
Homeತಾಜಾ ಸುದ್ದಿಹುಟ್ಟುಹಬ್ಬದ ದಿನವೇ 'ಟಗರು' ಚಿತ್ರದ ನಟಿಯೊಂದಿಗೆ ಸರಳ ಮದುವೆಯಾದ ಚಿಕ್ಕಣ್ಣ...

ಹುಟ್ಟುಹಬ್ಬದ ದಿನವೇ ‘ಟಗರು’ ಚಿತ್ರದ ನಟಿಯೊಂದಿಗೆ ಸರಳ ಮದುವೆಯಾದ ಚಿಕ್ಕಣ್ಣ…

spot_img
- Advertisement -
- Advertisement -

ನಿನ್ನೆಯಷ್ಟೇ ಕನ್ನಡದ ಟಾಪ್ ಹಾಸ್ಯ ಕಲಾವಿದರಲ್ಲಿ ಒಬ್ಬರಾದ ನಟ ಚಿಕ್ಕಣ್ಣ ಅವರ ಹುಟ್ಟುಹಬ್ಬ ಆಚರಿಸಿದ್ದಾರೆ. ಮೈಸೂರಿನ ಹಳ್ಳಿಯೊಂದರಲ್ಲಿ ಹುಟ್ಟಿ ಪ್ರತಿಭೆಯನ್ನೇ ಬಂಡವಾಳ ಮಾಡಿಕೊಂಡು ಜೀವನದಲ್ಲಿ ಕಲ್ಲು ಮುಳ್ಳಿನ ಹಾದಿಯಲ್ಲಿ ಸಾಗಿ ಇಂದು ಯಶಸ್ಸಿನ ಉತ್ತುಂಗದಲ್ಲಿ‌ ನಿಂತಿದ್ದಾರೆ.. ಆದರೆ ಆ ದಿನಗಳಲ್ಲಿ ಇದ್ದ ವಿನಯವೇ ಈಗಲೂ ಚಿಕ್ಕಣ್ಣನವರಲ್ಲಿದೆ.. ಅದು ಅವರ ದೊಡ್ಡ ಗುಣವೆನ್ನಬಹುದು..

ಇನ್ನು ವಯಸ್ಸು 30 ದಾಟಿತು ಮದುವೆ ಯಾವಾಗ ಮದುವೆ ಯಾವಾಗ ಎಂದು ಚಿಕ್ಕಣ್ಣನವರನ್ನು ಬಹಳಷ್ಟು ಬಾರಿ ಸ್ನೇಹಿತರು ಸಂಬಂಧಿಕರು ಪ್ರಶ್ನೆ ಮಾಡಿದ್ದೂ ಇದೆ.. ಈ ಹಿಂದೆ ನಿರೂಪಕಿ ಅನುಶ್ರೀ ಅವರೊಂದಿಗೆ ಚಿಕ್ಕಣ್ಣನವರ ಮದುವೆ ಅಂತ ಗಾಳಿ ಸುದ್ದಿಯೊಂದು ಹರಡಿತ್ತು.. ಆದರೆ ಆ ಸುದ್ದಿ ಸುಳ್ಳು ಎಂದು ಇಬ್ಬರೂ ಸ್ಪಷ್ಟನೆ ನೀಡಿದ್ದರು.. ಆ ಬಳಿಕ ಚಿಕ್ಕಣ್ಣನ ಮದುವೆ ವಿಚಾರ ಆಗಾಗ ಸದ್ದಾಗುತ್ತಲೇ ಇತ್ತು..

ಆದರೆ ಚಿಕ್ಕಣ್ಣ ತಮ್ಮ 35 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಇದೇ ದಿನ ಅಭಿಮಾನಿಗಳಿಗೆ ಸರಳ ಮದುವೆಯ ಶಾಕ್ ಕೊಟ್ಟಿದ್ದಾರೆ.. ಹೌದು ಚಿಕ್ಕಣ್ಣ ಹಾಗೂ ಟಗರು ಸಿನಿಮಾದ ಸರೋಜ ಅವರ ಸರಳ ಮದುವೆಯ ಫೋಟೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್‌ ಆಗಿದೆ.. ಅಷ್ಟೇ ಅಲ್ಲದೆ ಚಿಕ್ಕಣ್ಣ ಮದುವೆಯಾದ್ರು ಎಂಬ ಸುದ್ದಿಯೂ ಹರಡಿದೆ.. ಆದರೆ ಆಶ್ವರ್ಯ ಪಡಬೇಡಿ.. ಈ ಸುದ್ದಿ ನಿಜವಲ್ಲ.. ಶಾಕ್ ಆಗಿರೋದು ಅಭಿಮಾನಿಗಳಿಗಲ್ಲ ಬದಲಿಗೆ ಸ್ವತಃ ಚಿಕ್ಕಣ್ಣನಿಗೆ ಶಾಕ್ ಆಗಿದೆ.. ಹೌದು ಇದು ಸಿನಿಮಾವೊಂದರ ದೃಶ್ಯವಾಗಿದೆ.. ಈ ಫೋಟೋವನ್ನು ಇಂದು ಚಿಕ್ಕಣ್ಣನ ಹುಟ್ಟುಹಬ್ಬವಿದ್ದ ಕಾರಣ ಟಗರು ಸಿನಿಮಾದ ಕಾನ್ಸ್ಟೆಬಲ್ ಸರೋಜ ಖ್ಯಾತಿಯ ತ್ರಿವೇಣಿ ರಾವ್ ಅವರು‌ ಪೋಸ್ಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಆಗಿದ್ದು ಚಿಕ್ಕಣ್ಣನಿಗೆ ಮದುವೆಯೇ ಆಯ್ತು ಎಂಬ ಸುದ್ದಿ ಹರಡಿದೆ.. ಆದರೆ ಹುಟ್ಟುಹಬ್ಬದ ದಿನ ಚಿಕ್ಕಣನಿಗೆ ತನಗೇ ಗೊತ್ತಿಲದೇ ತನ್ನದೇ ಮದುವೆ ಆಗಿ ಹೋದ ಸುದ್ದಿ ಸರ್ಪ್ರೈಸ್ ಜೊತೆಗೆ ಶಾಕ್ ಕೂಡ ನೀಡಿದೆ..

- Advertisement -
spot_img

Latest News

error: Content is protected !!