Thursday, June 4, 2026
Homeತಾಜಾ ಸುದ್ದಿವಿಧಾನಸಭೆ ಸ್ಪೀಕರ್ ಪೀಠ ಬಿಟ್ಟು ತೆರಳಿದ ಹಿನ್ನೆಲೆ: ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ನೋಟೀಸ್ ನೀಡಲು ಸಿಎಂ...

ವಿಧಾನಸಭೆ ಸ್ಪೀಕರ್ ಪೀಠ ಬಿಟ್ಟು ತೆರಳಿದ ಹಿನ್ನೆಲೆ: ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ನೋಟೀಸ್ ನೀಡಲು ಸಿಎಂ ಆದೇಶ

- Advertisement -
- Advertisement -

ಬೆಂಗಳೂರು: ಅಧಿವೇಶನದಲ್ಲಿ ಶಾಸಕರ ಪ್ರಶ್ನೆಗಳಿಗೆ ಸಚಿವರು ಉತ್ತರ ನೀಡದ ಕಾರಣ ವಿಧಾನಸಭೆ ಸ್ಪೀಕರ್ ಕಲಾಪ ಮೊಟಕುಗೊಳಿಸಿ ಪೀಠ ಬಿಟ್ಟು ತೆರಳಿದ್ದಕ್ಕೆ ರಾಜ್ಯ ಸರ್ಕಾರ ಗಂಭೀರ ಕ್ರಮಕ್ಕೆ ಮುಂದಾಗಿದೆ.

ಸ್ಪೀಕರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಉತ್ತರ ನೀಡದ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ನೋಟೀಸ್ ನೀಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಆದೇಶಿಸಿದ್ದಾರೆ.

ವಸತಿ ಇಲಾಖೆ, ಲೋಕೋಪಯೋಗಿ ಇಲಾಖೆ,ಪಶುಸಂಗೋಪನಾ ಇಲಾಖೆ, ಸಾರಿಗೆ ಇಲಾಖೆ, ಐಟಿ-ಬಿಟಿ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಲು ಸಿಎಂ ನಿರ್ದೇಶನ ನೀಡಿದ್ದಾರೆ.

ಸಭೆಯಲ್ಲಿ ಐಎಎಸ್ ಅಧಿಕಾರಿಗಳಿಗೆ ನೋಟಿಸ್ ನೀಡಲು ಸಿಎಂಗೆ ಸ್ಪೀಕರ್ ಸೂಚನೆ ನೀಡಿದ್ದು, ಸ್ಪೀಕರ್ ಸೂಚನೆ ಮೇರೆಗೆ ಹಿರಿಯ ಐಎಎಸ್ ಅಧಿಕಾರಿಗಳಾಗಿರುವ ಸಂಬಂಧಿಸಿದ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಲು ಮುಖ್ಯಮಂತ್ರಿ ಆದೇಶ ಮಾಡಿದ್ದಾರೆ.ಅಲ್ಲದೇ ಸರಿಯಾದ ಉತ್ತರ ನೀಡದ ಅಧಿಕಾರಿಗಳ ಅಮಾನತ್ತಿಗೂ ಸಿಎಂ ಆದೇಶ ನೀಡಿದ್ದಾರೆ.

ಸಿಎಂ ಆದೇಶದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆದಿದ್ದಾರೆ

- Advertisement -

Latest News

error: Content is protected !!