- Advertisement -
![]()
- Advertisement -
ಉಡುಪಿ:ರಾತ್ರಿ ವೇಳೆ ನಿಲ್ಲಿಸಿದ್ದ ಬಸ್ ಗೆ ಚಿರತೆ ನುಗ್ಗಿದ ಅಚ್ಚರಿ ಹಾಗೂ ಆತಂಕಕಾರಿ ಘಟನೆ ಗರಡಿ ಮಜಲು ಎಂಬಲ್ಲಿ ನಡೆದಿದೆ.
ರಾತ್ರಿ ಟ್ರಿಪ್ ಗಳನ್ನು ಮುಗಿಸಿದ ನಂತರ. ಖಾಸಗಿ ಬಸ್ ಒಂದನ್ನು ಗರಡಿಮಜಲಿನಲ್ಲಿ ಪಾರ್ಕಿಂಗ್ ಮಾಡಲಾಗಿತ್ತು. ಬೆಳಿಗ್ಗೆ ಬಂದು ನೋಡಿದಾಗ ಸೀಟುಗಳನ್ನು ಹರಿದು ಹಾಕಲಾಗಿತ್ತು. ಯಾರೋ ಕಿಡಿಗೇಡಿಗಳು ಈ ಕೃತ್ಯ ಮಾಡಿರಬಹುದು ಎಂದು ಊಹಿಸಲಾಗಿತ್ತು. ಆದರೆ ಈ ಪರಿಸರದಲ್ಲಿ ಚಿರತೆಯ ಕಾಟ ಹೆಚ್ಚಿರುವುದರಿಂದ, ಬಸ್ಸಿನೊಳಗೆ ಚಿರತೆ ಬಂದಿರಬಹುದು ಎಂಬ ಸಂಶಯ ದಟ್ಟವಾಗಿದೆ.
ಡ್ರೈವರ್ ಸೀಟು ಹರಿದು ಹೋಗಿದೆ, ಬಾನೆಟ್ ಮೇಲೆ ಇದ್ದ ಕುಶನ್ ಹರಿದು ಹಾಕಲಾಗಿದೆ. ದೊಡ್ಡ ಗಾತ್ರದ ಬೆರಳಚ್ಚು ಕೂಡ ಇದೆ. ಈ ಭಾಗದಲ್ಲಿ ಚಿರತೆಯ ಕಾಟ ಜೋರಾಗಿದ್ದು ಬೋನು ಇರಿಸಲಾಗಿದೆ. ಚಿರತೆ ಬೋನ್ ಗೆ ಸೆರೆ ಸಿಕ್ಕುವವರೆಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ.
- Advertisement -


