Wednesday, June 19, 2024
Homeಉತ್ತರ ಕನ್ನಡರಸ್ತೆ ಅಪಘಾತದಲ್ಲಿ ಚಿರತೆ ಸಾವು

ರಸ್ತೆ ಅಪಘಾತದಲ್ಲಿ ಚಿರತೆ ಸಾವು

spot_img
- Advertisement -
- Advertisement -

ಕಾರವಾರ: ರಸ್ತೆ ಅಪಘಾತದಲ್ಲಿ ಗಂಡು ಚಿರತೆಯೊಂದು ಸಾವಿಗೀಡಾಗಿರುವ ಘಟನೆ ಕಾರವಾರದ ಬಿಣಗಾ ಬಳಿ ನಡೆದಿದೆ.‌ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ ಸಂಭವಿಸಿದ್ದು, ರಸ್ತೆ ಬದಿಯಲ್ಲಿ ಚಿರತೆ ಕಳೇಬರ ಪತ್ತೆಯಾಗಿದೆ.‌

ರಾತ್ರಿ ಸಮಯದಲ್ಲಿ ಅಪರಿಚಿತ ವಾಹನ‌ ಡಿಕ್ಕಿ ಹೊಡೆದು ಸಾವು‌ ಸಂಭವಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಅಪಘಾತವಾದ ವ್ಯಾಪ್ತಿಯಲ್ಲೇ ಚಿರತೆ ಓಡಾಟ ಸಿಸಿ ಟಿವಿಯಲ್ಲಿ ಪತ್ತೆಯಾಗಿತ್ತು.

ಅಪಘಾತ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ‌

- Advertisement -
spot_img

Latest News

error: Content is protected !!