Saturday, May 18, 2024
Homeಉತ್ತರ ಕನ್ನಡಸಂಸದ ಅನಂತ್ ಕುಮಾರ್ ಹೆಗಡೆ ತನ್ನ ಮಾವ ಅಂತ ಹೇಳಿ ವಂಚನೆ: ಲಕ್ಷಾಂತರ ರೂಪಾಯಿ ವಂಚಿಸಿದ...

ಸಂಸದ ಅನಂತ್ ಕುಮಾರ್ ಹೆಗಡೆ ತನ್ನ ಮಾವ ಅಂತ ಹೇಳಿ ವಂಚನೆ: ಲಕ್ಷಾಂತರ ರೂಪಾಯಿ ವಂಚಿಸಿದ ಶಿರಸಿಯ ಯುವತಿ

spot_img
- Advertisement -
- Advertisement -

ಕಾರವಾರ: ಉತ್ತರ ಕನ್ನಡ ಲೋಕಸಭಾ ಸಂಸದ ಅನಂತಕುಮಾರ ಹೆಗಡೆಯವರ ಹೆಸರು ಹೇಳಿಕೊಂಡು ಯುವತಿಯೊಬ್ಬಳು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಶಿರಸಿ ಮೂಲದ ರೇಖಾ ಹೆಗಡೆ ಎಂಬುವವರಿಂದ ವಂಚನೆ ನಡೆದಿದ್ದು, ಮೈಸೂರಿನ ಮಂಜುಳಾ ಎಂಬುವವರು ಸುಮಾರು 7 ಲಕ್ಷ ಈಕೆಗೆ ನೀಡಿ ವಂಚನೆಗೊಳಗಾಗಿದ್ದಾರೆ. ಉತ್ತರ ಕನ್ನಡ ಮೂಲದ ಶಿರಸಿಯವಳಾಗಿರುವ ರೇಖಾ ಹೆಗಡೆ ಮೈಸೂರಿನ ಕುವೆಂಪುನಗರ ವ್ಯಾಪ್ತಿಯ‌ ಮಂಜುಳಾ ಎನ್ನುವವರ ಮನೆಯಲ್ಲಿ ಬಾಡಿಗೆಗಿದ್ದರೆನ್ನಲಾಗಿದೆ. ಸಂಸದ ಅನಂತಕುಮಾರ್ ಹೆಗಡೆ ತನ್ನ ಮಾವ ಎಂದು ಹೇಳಿಕೊಂಡು ತಿರುಗುತ್ತಿದ್ದ ಈಕೆ, ಹೀಗೇ ಹೇಳಿಕೊಂಡು ಮಂಜುಳಾ ಅವರಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಾಳೆ ಎನ್ನಲಾಗಿದೆ. ಹಣ ನೀಡುವಂತೆ ಕೇಳಿದ್ದಕ್ಕೆ ಮಂಜುಳಾಗೆ ರೇಖಾ ಜೀವ ಬೆದರಿಕೆಯೊಡ್ಡಿರುವ ಆರೋಪವೂ ಕೇಳಿಬಂದಿದ್ದು, ಈ ಬಗ್ಗೆ ಮೈಸೂರಿನ ಕುವೆಂಪುನಗರ ಠಾಣೆಯಲ್ಲಿ ಅವರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇನ್ನು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಸಂಸದ ಅನಂತಕುಮಾರ ಹೆಗಡೆಯವರ ಆಪ್ತಕಾರ್ಯದರ್ಶಿ ಸುರೇಶ ಶೆಟ್ಟಿ ಕೂಡ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಪತಂಜಲಿ ಯೋಗಪೀಠದ ಹೆಸರಿನಲ್ಲಿ ವಂಚನೆ ಪತಂಜಲಿ ಯೋಗ ಪೀಠದಿಂದ ಪಂಚಕರ್ಮ ಚಿಕಿತ್ಸೆ ನೀಡುವುದಾಗಿ ನಂಬಿಸಿ ಯಲ್ಲಾಪುರದ ವ್ಯಕ್ತಿಯೊಬ್ಬರಿಂದ ಅಪರಿಚಿತನೊಬ್ಬ 2.66 ಲಕ್ಷ ರೂ. ಪಡೆದು ವಂಚಿಸಿದ್ದಾನೆ. ಯಲ್ಲಾಪುರದ ನೂತನ ನಗರ ನಿವಾಸಿ ಗಣಪತಿ ಹೊಸ್ಮನೆ ಎಂಬಾತರು ಪತಂಜಲಿ ಯೋಗ ಪೀಠದಿಂದ ಪಂಚಕರ್ಮ ಚಿಕಿತ್ಸೆಗೆ ಒಳಗಾಗಲು ಬಯಸಿದ್ದರು. ಇದಕ್ಕಾಗಿ ಇಂಟರ್‌ನೆಟ್‌ನಲ್ಲಿ ಹುಡುಕಿದಾಗ ಹರಿದ್ವಾರದಲ್ಲಿ ಚಿಕಿತ್ಸೆ ನೀಡುವ ಬಗ್ಗೆ ತಿಳಿದು, ಅಲ್ಲಿನ ವ್ಯಕ್ತಿಯೊಬ್ಬರನ್ನು ಮೊಬೈಲ್ ನಂಬರ್ ಮೂಲಕ ಸಂಪರ್ಕಿಸಿದ್ದರು. ಕರೆ ಸ್ವೀಕರಿಸಿದ ಆತ ಚಿಕಿತ್ಸೆ ಹಾಗೂ ವಸತಿ ವ್ಯವಸ್ಥೆಗಾಗಿ ವಾಟ್ಸಪ್ ಮೂಲಕ ಬ್ಯಾಂಕ್ ಖಾತೆ ವಿವರ ನೀಡಿದ್ದು, ಅದಕ್ಕೆ ಹಣ ಸಂದಾಯ ಮಾಡುವಂತೆ ತಿಳಿಸಿದ್ದಾನೆ.

ಆತ ಕಳುಹಿಸಿದ ಮಾಹಿತಿಯಲ್ಲಿ ಪತಂಜಲಿ ಯೋಗಪೀಠ ಎಂದು ಬರೆಯಲಾಗಿದ್ದು, ಆತ ನೀಡಿದ ಬ್ಯಾಂಕ್ ಖಾತೆ ಸಹ ಪತಂಜಲಿ ಹೆಸರಿನಲ್ಲಿದೆ. ಹೀಗಾಗಿ ಆ ಖಾತೆಗೆ ಅವರು ಹಣ ಪಾವತಿಸಿದ್ದಾರೆ. ಜೊತೆಗೆ ತಮ್ಮ ಪರಿಚಿತರಾದ ವೆಂಕಟ್ರಮಣ ಭಟ್ಟ, ನರಸಿಂಹ ಭಟ್ಟ, ವಿಶ್ವನಾಥ ಗಾಂವಕರ್ ಮೂಲಕವೂ ಹಣ ಹಾಕಿಸಿದ್ದಾರೆ. ಆ ಬಳಿಕ ವಿಚಾರಿಸಿದಾಗ ತಾವು ಮೋಸ ಹೋಗಿರುವುದು ಗೊತ್ತಾಗಿದ್ದು, ಅಲ್ಲಿಯವರೆಗೆ 2,66,400 ರೂ.ಗಳನ್ನು ಇವರು ಕಳೆದುಕೊಂಡಿದ್ದಾರೆ. ಇದೀಗ ತಮಗೆ ನ್ಯಾಯ ಒದಗಿಸುವಂತೆ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!