Monday, June 8, 2026
Homeತಾಜಾ ಸುದ್ದಿ'ಅಲ್ಲಾವುದ್ದೀನನ ದೀಪ' ಎಂದು 31 ಲಕ್ಷ ರೂ ಪಂಗನಾಮ ಹಾಕಿದ ಖದೀಮರು

‘ಅಲ್ಲಾವುದ್ದೀನನ ದೀಪ’ ಎಂದು 31 ಲಕ್ಷ ರೂ ಪಂಗನಾಮ ಹಾಕಿದ ಖದೀಮರು

- Advertisement -
- Advertisement -

ಉತ್ತರ ಪ್ರದೇಶ: ಇಲ್ಲಿನ ವೈದ್ಯರೊಬ್ಬರಿಗೆ 31 ಲಕ್ಷ ರೂ.ಗಳಿಗೆ ವಸ್ತುವೊಂದನ್ನು ಮಾರಾಟ ಮಾಡಿ ವಂಚಿಸಿದ್ದ ಇಬ್ಬರು ವಂಚಕರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಜನಪದ ಕಥೆಗಳಲ್ಲಿ ಬರುವ ಪಾತ್ರಧಾರಿಯಾದ ಅಲ್ಲಾವುದ್ದೀನನ ದೀಪವು ಕೇಳಿದ್ದನ್ನು ಕೊಡುತ್ತದೆ, ಈ ದೀಪದಿಂದ ಉಗಮವಾದ ಮಾಯಾಸ್ವರೂಪಿಯೊಂದು ಕೇಳಿದ್ದನ್ನು ಕೊಡುತ್ತದೆ ಎಂಬುದು ಕಥೆಯ ತಿರುಳು. ಈ ಕಥೆಯನ್ನು ಮಾದರಿಯಾಗಿಟ್ಟುಕೊಂಡು ವಂಚಿಸಿದ ಘಟನೆ ವರದಿಯಾಗಿದೆ.

ಇಕ್ರಮುದ್ದೀನ್ ಹಾಗೂ ಅನೀಸ್ ಎಂಬ ಹೆಸರಿನ ವಂಚಕರ ವಯಸ್ಕ ತಾಯಿಗೆ ಚಿಕಿತ್ಸೆ ಕೊಡುತ್ತಿದ್ದ ಡಾ. ಎಲ್‌.ಎ. ಖಾನ್‌ಗೆ ಇಬ್ಬರೂ ಸೇರಿ ನಂಬಿಸಿ ತಮ್ಮ ಬಾಬಾನನ್ನು ಭೇಟಿಯಾದರೆ ಆತ ಮಾಡುವ ಮಾಯಾವಿ ಕೆಲಸಗಳನ್ನು ನೋಡಬಹುದು ಎಂದು ವೈದ್ಯ ಖಾನ್ ನನ್ನ ಮರಳುಮಾಡಿದ್ದಾರೆ.ತಮ್ಮಬಳಿಯ ದೀಪ 1.5 ಕೋಟಿ ರೂ. ಮೌಲ್ಯದ್ದಾಗಿದ್ದು, ಮನೆಯಲ್ಲಿ ಇಟ್ಟುಕೊಂಡರೆ ಅಗಾಧವಾದ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿ ಮಾರಾಟ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!