Monday, June 8, 2026
Homeಕರಾವಳಿಚಾರ್ಮಾಡಿ ಘಾಟ್: ನಡುರಸ್ತೆಯಲ್ಲೇ ಬಾಕಿಯಾದ ಬೃಹತ್ ಗಾತ್ರದ ಲಾರಿ

ಚಾರ್ಮಾಡಿ ಘಾಟ್: ನಡುರಸ್ತೆಯಲ್ಲೇ ಬಾಕಿಯಾದ ಬೃಹತ್ ಗಾತ್ರದ ಲಾರಿ

- Advertisement -
- Advertisement -

ಚಾರ್ಮಾಡಿ: ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಘಾಟ್ ನಲ್ಲಿ ಲಾರಿಯೊಂದು ತಿರುವಿನಲ್ಲಿ ಸಂಚರಿಸಲಾಗದೆ ಬಾಕಿಯಾಗಿ ಎಲ್ಲಾ ವಾಹನಗಳಿಗೂ ಸಂಚಾರಕ್ಕೆ ಅಡಚಣೆಯಾದ ಘಟನೆ ಇಂದು ನಡೆಯಿತು.

ಭಾರಿ ಗಾತ್ರದ ವಾಹನಗಳಿಗೆ ಈಗಲೂ ಚಿಕ್ಕಮಗಳೂರು ಮತ್ತು ದಕ್ಷಿಣ ಜಿಲ್ಲೆಗೆ ಸೇರಿದ ಚಾರ್ಮಾಡಿ ಘಾಟ್ ನಲ್ಲಿ ನಿಷೇಧ ಹೇರಲಾಗಿದೆ. ಚಾರ್ಮಾಡಿ ಮತ್ತು ಕೊಟ್ಟಿಗೆಹಾರದಲ್ಲಿ ಪೊಲೀಸ್ ಚೆಕ್ ಪೋಸ್ಟ್ ಗಳಿದ್ದರೂ ಬೃಹತ್ ಗಾತ್ರದ ಲಾರಿಗಳು ಘಾಟ್ ರಸ್ತೆಯಲ್ಲಿ ಸಂಚರಿಸಿ, ಸುಗಮ ಸಂಚಾರಕ್ಕೆ ಅಡಚಣೆ ಮಾಡುತ್ತಿರುವುದಕ್ಕೆ ಇತರ ವಾಹನ ಚಾಲಕರು ಹಿಡಿಶಾಪ ಹಾಕುತ್ತಿದ್ದಾರೆ.

- Advertisement -

Latest News

error: Content is protected !!