Friday, March 29, 2024
Homeಮನರಂಜನೆಶೆಫ್ ಆದ ನಟ ದರ್ಶನ್: ಡಿ ಬಾಸ್ ಕೇಕ್ ತಯಾರಿಸಿದ್ದು ಯಾರಿಗಾಗಿ ಗೊತ್ತಾ?

ಶೆಫ್ ಆದ ನಟ ದರ್ಶನ್: ಡಿ ಬಾಸ್ ಕೇಕ್ ತಯಾರಿಸಿದ್ದು ಯಾರಿಗಾಗಿ ಗೊತ್ತಾ?

spot_img
- Advertisement -
- Advertisement -

ಮೈಸೂರು: ನಟ ದರ್ಶನ್ ಇತ್ತೀಚೆಗೆ ಬೇರೆ ಬೇರೆ ವಿಚಾರಗಳಿಗೆ ಸುದ್ದಿಯಾಗುತ್ತಲೇ ಇದ್ದಾರೆ. ಅದರಲ್ಲೂ ಸ್ವಲ್ಪ ಟೈಮ್ ಸಿಕ್ರೆ ಸಾಕು  ದರ್ಶನ್ ತಮ್ಮ ಫಾರ್ಮ್ ಹೌಸ್ ನಲ್ಲೇ ಕಾಲ ಕಳೆಯುತ್ತಾರೆ. ಇದೀಗ ದರ್ಶನ್ ಶೆಫ್ ಆಗಿ ಕೇಕ್ ತಯಾರಿಸಿದ್ದಾರೆ.

ಅರೆ! ದರ್ಶನ್ ಕೇಕ್ ತಯಾರಿಸಿದ್ದು ಯಾರಿಗಾಗಿ ಅಂತಾ ಹುಬ್ಬೇರಿಸ್ತಿದ್ದೀರಾ? ಡಿ ಬಾಸ್ ಕೇಕ್ ತಯಾರಿಸಿದ್ದು ಕ್ರಿಸ್ ಮಸ್ ಹಬ್ಬಕ್ಕಾಗಿ. ಹೌದು.. ಕ್ರಿಸ್‍ಮಸ್ ಹಿನ್ನೆಲೆ  ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ನಲ್ಲಿ ನಟ ದರ್ಶನ್ ಕೇಕ್ ಮಿಕ್ಸಿಂಗ್ ಮಾಡಿ ಗಮನ ಸೆಳೆದಿದ್ದಾರೆ. ದಾಸ ಶೆಫ್ ಆಗಿ ಕೇಕ್ ಮಿಕ್ಸ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.

ಇನ್ನು ದರ್ಶನ್‍ಗೆ ನಿರ್ಮಾಪಕ ಸಂದೇಶ್ ಸಾಥ್ ನೀಡಿದ್ದು, ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ನಿರ್ಮಾಪಕ ಸಂದೇಶ್ ನಾಗರಾಜು ಭಾಗಿಯಾಗಿ ಕ್ರಿಸ್‍ಮಸ್ ಅಂಗವಾಗಿ ತಯಾರಾಗುತ್ತಿರುವ ಕೇಕ್ ತಯಾರಿಕೆಗೆ ಕೈ ಜೋಡಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತರರೊಂದಿಗೆ ಕ್ರಿಸ್‍ಮಸ್ ಸಂಭ್ರಮದಲ್ಲಿ ತೊಡಗಿ, ಕೇಕ್ ಮಿಕ್ಸಿಂಗ್ ಮಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸ್ನೇಹಿತರ ಜೊತೆ ಕ್ರಿಸ್ ಮಸ್ ಹಬ್ಬದ ಕೇಕ್ ಮಿಕ್ಸಿಂಗ್ ಮಾಡಿ ಸಂಭ್ರಮಿಸಿದ್ದಾರೆ.

- Advertisement -
spot_img

Latest News

error: Content is protected !!