Thursday, June 25, 2026
Homeಮನರಂಜನೆಚೈತ್ರಾ ಕೊಟ್ಟೂರಿಗೆ ಕೂಡಿ ಬಂತು ಕಂಕಣ..ಹುಡ್ಗ ಯಾರು ಗೊತ್ತಾ?

ಚೈತ್ರಾ ಕೊಟ್ಟೂರಿಗೆ ಕೂಡಿ ಬಂತು ಕಂಕಣ..ಹುಡ್ಗ ಯಾರು ಗೊತ್ತಾ?

- Advertisement -
- Advertisement -

ಬೆಂಗಳೂರು : ಬಿಗ್ ಬಾಸ್ ಸೀಸನ್ 7 ನಲ್ಲಿ ಸುದ್ದಿಯಲ್ಲದ ಕಾರಣಗಳಿಗೆ ಸುದ್ದಿಯಾದವರು ನಟಿ ಚೈತ್ರಾ ಕೊಟ್ಟೂರು ಅವರು. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಚೈತ್ರಾ ಒಂದಲ್ಲ ಒಂದು ಕಾರಣಗಳಿಗೆ ಸುದ್ದಿಯಾಗುತ್ತಲೇ ಇದ್ದರು. ಅದರಲ್ಲೂ ಶೈನ್ ಶೆಟ್ಟಿ ಅವರನ್ನು ಚೈತ್ರಾ ವಿವಾಹವಾಗಿಯೇ ಬಿಟ್ರು ಅನ್ನೋ ಲೆವೆಲ್ ಗೆ ಟ್ರೋಲ್ ಗೆ ಒಳಗಾಗಿದ್ದರು. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೂ ಚೈತ್ರಾ ಸುದ್ದಿಯಾಗುತ್ತಲೇ ಇದ್ದಾರೆ. ಸಿನಿಮಾಗಳ ವಿಚಾರಕ್ಕೆ ಪದೇ ಪದೇ ಚೈತ್ರಾ ಕೊಟ್ಟೂರು ಹೆಸರು ಕೇಳಿ ಬರುತ್ತಲೇ ಇದೆ.

ಅಂದ್ಹಾಗೆ ಚೈತ್ರಾ ಇತ್ತೀಚೆಗೆ ಸಿನಿಮಾವೊಂದರ ನಿರ್ದೇಶನ ಮಾಡುವುದರ ಬಗ್ಗೆಯೂ ಮಾತನಾಡಿದ್ದರು. ಅಲ್ಲದೇ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರವಿ ಬೆಳಗೆರೆ ಅವರನ್ನು ಭೇಟಿಯಾಗಿ ಮಾತುಕತೆ ಕೂಡ ನಡೆಸಿದ್ದರು ಚೈತ್ರಾ. ಇದೆಲ್ಲದರ ಮಧ್ಯೆ ಇದೀಗ ಚೈತ್ರಾ ಅವರು ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ತಮಗೆ ಕಂಕಣ ಭಾಗ್ಯ ಕೂಡಿ ಬಂದಿದೆ ಎಂದಿದ್ದಾರೆ ಚೈತ್ರಾ. ಅಲ್ಲದೇ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕೂಡ ಹಾಕಿದ್ದಾರೆ ಚೈತ್ರಾ. ಐ ಆ್ಯಮ್ ಇನ್ ಲವ್. ಯಾರ ಜೊತೆಗೆ ಅಂತಾ ಕೇಳಬೇಡಿ..ಐ ಕಾಂಟ್ ಡಿಸ್ಕ್ಲೋಸ್ ಇಟ್ ಅಂತಾ ಡ್ರೋನ್ ಪ್ರತಾಪ್ ಸ್ಟೈಲ್ ನಲ್ಲಿ ಹೇಳಿದ್ದಾರೆ ಚೈತ್ರಾ.

ಇನ್ನು ಎಲ್ಲವೂ ಅಂದುಕೊಂಡಂತೆ ಆದರೆ ಚೈತ್ರಾ 2021ರಲ್ಲಿ ತಾವು ಪ್ರೀತಿಸಿದ ಹುಡುಗನ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಆದರೆ ಚೈತ್ರಾ ಹೃದಯಗೆದ್ದ ಆ ಹುಡುಗ ಯಾರು ಅನ್ನೋದು ಈಗ ಚೈತ್ರಾ ಅಭಿಮಾನಿಗಳ ಕುತೂಹಲ.

- Advertisement -

Latest News

error: Content is protected !!