Friday, June 5, 2026
Homeಕರಾವಳಿಮಂಗಳೂರಿನಲ್ಲಿ ಸರಗಳ್ಳತನ ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರ ಬಂಧನ

ಮಂಗಳೂರಿನಲ್ಲಿ ಸರಗಳ್ಳತನ ಹಾಗೂ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರ ಬಂಧನ

- Advertisement -
- Advertisement -

ಮಂಗಳೂರುನಗರದಲ್ಲಿ ಸರಕಳ್ಳತನ ಮತ್ತು ಬೈಕ್‌ ಕಳ್ಳತನ ಪ್ರಕರಣ ಮಾಡುತ್ತಿದ್ದ ಮೂವರನ್ನು ಅಪರಾಧ ಪತ್ತೆದಳ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಪೆರ್ಮನ್ನೂರು ಚೆಂಬುಗುಡ್ಡೆಯ ಬಿ.ಕೆ.ಕಾಟೇಜ್‌ ನಿವಾಸಿ ಹಬೀಬ್‌ ಹಸನ್‌ ಆಲಿಯಾಸ್‌ ಅಬ್ಬಿ(39), ಬಿ.ಸಿ.ರೋಡ್‌ ಪಲ್ಲಮಜಲು ನಿವಾಸಿ ಅಬ್ದುಲ್‌ ಮನ್ನಾನ್‌ ಆಲಿಯಾಸ್‌ ಅಬ್ದುಲ್‌ ಮುನಾಫ್‌(32) ಮತ್ತು ಉಡುಪಿ ಪೆರ್ಡೂರು ಗ್ರಾಮ ಹಿರಿಯಡ್ಕ ಅಲಂಕಾರು ಮನೆಯ ಮೊಹಮ್ಮದ್‌ ತೌಸಿಫ್‌ ಆಲಿಯಾಸ್‌ ಶೈಲು ಆಲಿಯಾಸ್‌ ಮುನ್ನ(28) ಬಂಧಿತ ಆರೋಪಿಗಳು.

ಬಂಧಿತರಿಂದ ಒಟ್ಟು ಅಂದಾಜು 2.55 ಲಕ್ಷ ರೂಪಾಯಿ ಮೌಲ್ಯದ ಎರಡು ಚಿನ್ನದ ಕರಿಮಣಿ ಸರಗಳು, ಕಳವು ಮಾಡಿದ ನಾಲ್ಕು ದ್ವಿಚಕ್ರ ವಾಹನ, ಅಪರಾಧ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ, 3 ಮೊಬೈಲ್‌ ಪೋನ್‌ ಸೇರಿದಂತೆ ಒಟ್ಟು ಅಂದಾಜು 5.19 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

- Advertisement -

Latest News

error: Content is protected !!