Tuesday, July 1, 2025
Homeತಾಜಾ ಸುದ್ದಿಡ್ರಗ್ಸ್ ಕೇಸ್ ಆರೋಪಿಗಳಿಗೆ ತನಿಖೆಯ ಮಾಹಿತಿ ರವಾನೆ, ಸಿಸಿಬಿ ಎಸಿಪಿ ಅಮಾನತು

ಡ್ರಗ್ಸ್ ಕೇಸ್ ಆರೋಪಿಗಳಿಗೆ ತನಿಖೆಯ ಮಾಹಿತಿ ರವಾನೆ, ಸಿಸಿಬಿ ಎಸಿಪಿ ಅಮಾನತು

spot_img
- Advertisement -
- Advertisement -

ಬೆಂಗಳೂರು  : ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಪೊಲೀಸರ ಹೆಸರು ತಳುಕು ಹಾಕಿತ್ತು. ಸಿಸಿಬಿಯ ಎಸಿಪಿ ಮುಧವಿ ಅವರು ಪ್ರಕರಣದ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಅಲ್ಲದೇ ಆರೋಪಿಗಳ ಜೊತೆಗೆ ತನಿಖೆಯ ಮಾಹಿತಿ ಹಂಚಿಕೊಂಡಿದ್ದಾರೆ. ಇಂತಹ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಸರ್ಕಾರಕ್ಕೆ ಸಿಸಿಬಿ ಮುಖ್ಯಸ್ಥರು ಪತ್ರ ಬರೆದಿದಿದ್ದರು. ಈ ಪತ್ರದ ಹಿನ್ನಲೆಯಲ್ಲಿ ಸಿಸಿಬಿಯ ಎಸಿಪಿ ಮುಧವಿ ಅವರನ್ನು ಸರ್ಕಾರ ಅಮಾನತುಗೊಳಿಸಿ ಆದೇಶಿಸಿದೆ.

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ನಲ್ಲಿ ಆರೋಪಿಗಳ ಬೆನ್ನಿಗೆ ಸಿಸಿಬಿಯ ಎಸಿಪಿ ಮುಧವಿ ಅವರು ನಿಂತಿದ್ದರು ಎಂಬುದಾಗಿ ತಿಳಿದು ಬಂದಿತ್ತು. ಡ್ರಗ್ಸ್ ಪ್ರಕರಣದ ಆರೋಪಿಗಳಾದಂತ ವಿರೇನ್ ಖನ್ನಾ, ಶೇಖ್ ಫಾಜಿಲ್ ಜೊತೆಗೆ ಸಿಸಿಬಿ ಎಸಿಪಿ ಮುಧವಿ ಅವರು ತನಿಖೆಯ ಮಾಹಿತಿ ಹಂಚಿಕೊಳ್ಳುತ್ತಿರುವುದಾಗಿ ತಿಳಿದಿತ್ತು.

ಈ ಕುರಿತಂತೆ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಸರ್ಕಾರಕ್ಕೆ ಪತ್ರ ಬರೆದಿದ್ದು, ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿಯ ಎಸಿಪಿ ಮುಧವಿ ಅವರು ತನಿಖೆಯ ಮಾಹಿತಿ ಹಂಚಿಕೊಳ್ಳುತ್ತಿದ್ದ, ಆರೋಪಿಗಳಿಗೆ ನೆರವಾಗಿದ್ದಾರೆ. ಹೀಗಾಗಿ ಅವರನ್ನು ಅಮಾನತುಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆದು ಕೋರಿದ್ದರು. ಹೀಗಾಗಿ ಸಿಸಿಬಿಯ ಎಸಿಪಿ ಮುಧವಿ ಅವರನ್ನು ಸರ್ಕಾರ ಅಮಾನತುಗೊಳಿಸಿ ಆದೇಶಿದೆ. ಈ ಮೂಲಕ ಆರೋಪಿಗಳಿಗೆ ನೆರವಾಗುತ್ತಿದ್ದ ಪೊಲೀಸ್ ಅಧಿಕಾರಿಯನ್ನು ಸಸ್ಪೆಂಡ್ ಮಾಡಿದೆ.

- Advertisement -
spot_img

Latest News

error: Content is protected !!