Tuesday, July 14, 2026
Homeಕರಾವಳಿಉಡುಪಿಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ : ಮಹಿಳೆ ಸಾವು, ನಾಲ್ವರು ಮಕ್ಕಳಿಗೆ ಗಾಯ

ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ : ಮಹಿಳೆ ಸಾವು, ನಾಲ್ವರು ಮಕ್ಕಳಿಗೆ ಗಾಯ

- Advertisement -
- Advertisement -

ಕುಂದಾಪುರ: ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ಮಹಿಳೆಯೊಬ್ಬರು ಮೃತಪಟ್ಟು ನಾಲ್ವರು ಮಕ್ಕಳು ಸಹಿತ ಐವರು ಗಾಯಗೊಂಡ ನಿನ್ನೆ ಸಂಜೆ ನಡೆದಿದೆ.

ಕೆಮ್ಮಣ್ಣು ಗ್ರಾಮ ಹೂಡೆ ನಿವಾಸಿ ಸಿಬ್ಗತುಲ್ಲಾ ಎಂಬವರ ಪತ್ನಿ ಸುಹಾನ(30) ಮೃತ ದುರ್ದೈವಿ. ಸಿಬ್ಗತುಲ್ಲಾ ಮತ್ತು ಅವರ ಮಕ್ಕಳಾದ ಸಾಹಿಮ್ (7), ಸಿದ್ರಾ(4), ಮನ್ಹಾ (2) ಮತ್ತು ಮೂರು ತಿಂಗಳ ಮರಿಯಮ್ ಗಾಯಗೊಂಡವರು ಎಂದು ಗುರುತಿಸಲಾಗಿದೆ.

ಪತ್ನಿಯ ಮನೆಯಾದ ಭಟ್ಕಳದಿಂದ ಹೂಡೆಗೆ ಬರುತ್ತಿದ್ದಾಗ, ಸಿಬ್ಗತುಲ್ಲಾ ಚಲಾಯಿಸುತ್ತಿದ್ದ ಕಾರು, ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾಯಿತ್ತೆನ್ನಲಾಗಿದೆ. ಇದರ ಪರಿಣಾಮ ಕಾರಿನಲ್ಲಿದ್ದ ಸುಹಾನ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಅದೇ ರೀತಿ ಕಾರಿನಲ್ಲಿದ್ದ ಇವರ ನಾಲ್ವರು ಮಕ್ಕಳು ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!