Thursday, June 4, 2026
Homeಕರಾವಳಿಸುಳ್ಯದ ಪೆರಾಜೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ

ಸುಳ್ಯದ ಪೆರಾಜೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ

- Advertisement -
- Advertisement -

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತವಾಗಿ ನಾಲ್ವರು ಗಾಯಗೊಂಡಿರುವ ಘಟನೆ ಸುಳ್ಯದ ಪೆರಾಜೆ ಬಳಿ ನಡೆದಿದೆ.

ಹಳೆಗೇಟು ಬೆಟ್ಟಂಪಾಡಿ ನಿವಾಸಿ ಬಶೀರ್ ಎಂಬುವವರು ವಿದೇಶಕ್ಕೆ ತೆರಳುತ್ತಿದ್ದ ತಮ್ಮ ಸಂಬಂಧಿಕರನ್ನು ಕಣ್ಣೂರು ಏರ್ಪೋರ್ಟಿಗೆ ಬಿಟ್ಟು ಹಿಂತಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

ಕಾರಿನಲ್ಲಿ ಚಾಲಕ ಶರೀಫ್ ಹಾಗೂ ಬಶೀರ್, ಅವರ ಪತ್ನಿ, ಮತ್ತೋರ್ವ ಕುಟುಂಬದ ಮಹಿಳೆ, ಹಾಗೂ ಏಳು ವರ್ಷದ ಮಗುವೊಂದು ಗಾಯಗೊಂಡಿದ್ದಾರೆ.ಕಾರು ಅಪಘಾತದಿಂದ ನಾಲ್ವರಿಗೆ ಸಣ್ಣಪುಟ್ಟ ಗಾಯವಾಗಿದ್ದು ಮಗು ಪ್ರಾಣಾಪಾಯದಿಂದ ಪಾರಾಗಿದೆ. ಗಾಯಾಳುವನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!