Thursday, June 4, 2026
Homeಕರಾವಳಿಉಡುಪಿಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು- ಉದ್ಯಮಿ ಮೃತ್ಯು, ಮಹಿಳೆ ಗಂಭೀರ

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು- ಉದ್ಯಮಿ ಮೃತ್ಯು, ಮಹಿಳೆ ಗಂಭೀರ

- Advertisement -
- Advertisement -

ಉಡುಪಿ: ಬಾರಕೂರು ಕಡೆಯಿಂದ ಸಾಬರಕಟ್ಟೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ತಡೆಗೋಡೆ ಇಲ್ಲದ ಚೌಳಿಕೆರೆಗೆ ಉರುಳಿ ಬಿದ್ದು ಓರ್ವ ಸಾವನ್ನಪ್ಪಿ, ಮತ್ತೋರ್ವ ಮಹಿಳೆ ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರಕೂರು ಚೌಳಿಕೆರೆ ಬಳಿ ನಡೆದಿದೆ.

ಮೃತಪಟ್ಟವರನ್ನು ಬೀಜಾಡಿ ಫ್ಲೈವುಡ್‌‌ ಅಂಗಡಿ ಮಾಲಕ, ವಕ್ವಾಡಿ ನಿವಾಸಿ ಸಂತೋಷ ಶೆಟ್ಟಿ(40) ಎಂದು ಗುರುತಿಸಲಾಗಿದ್ದು, ಗಾಯಗೊಂಡಿರುವ ಮಹಿಳೆಯನ್ನು ವಕ್ವಾಡಿಯ ಶ್ವೇತಾ(23) ಎನ್ನಲಾಗಿದೆ.

ಇವರು ಸಂತೋಷ್‌‌ ಶೆಟ್ಟಿ ಅವರ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಸದ್ಯ ಇವರು ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರಿನಲ್ಲಿದ್ದ ಸಂತೋಷ ಶೆಟ್ಟಿ ಅವರನ್ನು ತಕ್ಷಣವೇ ಸ್ಥಳೀಯರು ರಕ್ಷಿಸುವ ಪ್ರಯತ್ನ ಮಾಡಿದರು. ಆದರೆ, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಂತೋಷ ಶೆಟ್ಟಿ ಅವರು ಮೃತಪಟ್ಟರೆನ್ನಲಾಗಿದೆ.

ಘಟನೆಯ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!