Sunday, June 7, 2026
HomeUncategorizedಬಂಟ್ವಾಳ: ಅಕ್ರಮ ಗೋವುಗಳ ಸಾಗಾಟ, ಓರ್ವನ ಬಂಧನ

ಬಂಟ್ವಾಳ: ಅಕ್ರಮ ಗೋವುಗಳ ಸಾಗಾಟ, ಓರ್ವನ ಬಂಧನ

- Advertisement -
- Advertisement -

ಬಂಟ್ವಾಳ: ಸರಪಾಡಿಯಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವೇಳೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.

ಮೊಹಮ್ಮದ್ ಹನೀಫ್ ಬಂಧಿತ ಆರೋಪಿ.

ಕಣ್ಣೂರು ಬಿರ್ಪುಗುಡ್ಡೆ ಇಬ್ರಾಹಿಂ ಎಂಬುವರು ಕೊಟ್ಟುಂಜ ಬಾಲಕೃಷ್ಣ ಪೂಜಾರಿ ಅವರಿಂದ ಜಾನುವಾರುಗಳನ್ನು ಖರೀದಿಸಿ ಮಹಮ್ಮದ್ ಹನೀಫ್ ಎಂಬ ವ್ಯಕ್ತಿಯ ಸಹಾಯದಿಂದ ಪರವಾನಗಿರಹಿತ ಮಹೀಂದ್ರಾ ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದರು. ಈ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಸುಮಾರು 10,500 ಸಾವಿರ ರೂ. ಮೌಲ್ಯದ ಒಂದು ದನ, ಹೋರಿ, ಗಂಡು ಕರು ಹಾಗೂ ಒಂದು ಹೆಣ್ಣು ಕರು ಸಹಿತ 2 ಲಕ್ಷ ಮೌಲ್ಯದ ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳಾದ ರಾಧಾಕೃಷ್ಣ, ವಿಶ್ವನಾಥ ರೈ, ಸಿಬ್ಬಂದಿಗಳಾದ ವಾಸು ನಾಯ್ಕ, ಜನಾರ್ಧನ, ಶಿವಕುಮಾರ್, ಪುನೀತ್ ಕುಮಾರ್, ಸೋಮಶೇಖರ್ ಭಾಗವಹಿಸಿದ್ದರು.

- Advertisement -

Latest News

error: Content is protected !!