Tuesday, May 7, 2024
Homeತಾಜಾ ಸುದ್ದಿರೈತ ಶಕ್ತಿ ಯೋಜನೆಯಡಿ ರೈತರಿಗೆ ಡೀಸೆಲ್ ಸಬ್ಸಿಡಿಗೆ ಸಚಿವ ಸಂಪುಟ ಒಪ್ಪಿಗೆ

ರೈತ ಶಕ್ತಿ ಯೋಜನೆಯಡಿ ರೈತರಿಗೆ ಡೀಸೆಲ್ ಸಬ್ಸಿಡಿಗೆ ಸಚಿವ ಸಂಪುಟ ಒಪ್ಪಿಗೆ

spot_img
- Advertisement -
- Advertisement -

ಬೆಂಗಳೂರು: ರೈತ ಶಕ್ತಿ ಯೋಜನೆಯಡಿ ರೈತರಿಗೆ ಡೀಸೆಲ್ ಸಬ್ಸಿಡಿ ನೀಡಲು ಇಂದು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.‌

ಸಬ್ಸಿಡಿ ಸೌಲಭ್ಯ ಪಡೆಯುವ ರೈತರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ. ಫ್ರೂಟ್ಸ್ FRUITS (Farmers Registration and Unified Beneficiary Information System) Portal ನಲ್ಲಿನ ನೋಂದಣಿಯಂತೆ ರೈತರ ಹಿಡುವಳಿಯ ಆಧಾರದ ಮೇಲೆ ಪ್ರತಿಯೊಬ್ಬ ರೈತರಿಗೆ ಪ್ರತಿ ಎಕರೆಗೆ ರೂ.250 ಗಳಂತೆ ಗರಿಷ್ಟ 5 ಎಕರೆಗೆ ರೂ.1,250 ರವರೆಗೆ ಡೀಸಲ್ ಸಹಾಯಧನವನ್ನು ರಾಜ್ಯ ಸರ್ಕಾರದಿಂದ ಲಭ್ಯವಾಗಲಿದೆ

ರೈತರು ತಮ್ಮ ವಿವರಗಳನ್ನು ಫ್ರೂಟ್ಸ್ (FRUITS) ಪೋರ್ಟಲ್ ನಲ್ಲಿ ನೋಂದಣಿಯಾಗಿರದಿದ್ದಲ್ಲಿ ತಮ್ಮ ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಖಾತೆ, ಪಹಣಿ ವಿವರ ಮತ್ತು ಜಾತಿ ಪ್ರಮಾಣ ಪತ್ರದೊಂದಿಗೆ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಚೇರಿಗಳಲ್ಲಿ ತಮ್ಮ ಎಲ್ಲಾ ಸರ್ವೆ ನಂಬರ್ ಅಥವಾ ಭೂ ಹಿಡುವಳಿಗಳನ್ನು ಸೇರಿಸುವುದರೊಂದಿಗೆ ನೋಂದಾಯಿಸಿಕೊಳ್ಳಬಹುದಾಗಿದೆ.

- Advertisement -
spot_img

Latest News

error: Content is protected !!