Wednesday, June 3, 2026
Homeಕರಾವಳಿಮಂಗಳೂರು: ಸಿ.ಎಂ ಸಿದ್ದರಾಮಯ್ಯ ಮುಸ್ಲಿಂ ಒಲೈಕೆ ಹೇಳಿಕೆ ವಿಚಾರಕ್ಕೆ ಮಾಜಿ ಸಚಿವ ಸಿಟಿ ರವಿ ತಿರುಗೇಟು

ಮಂಗಳೂರು: ಸಿ.ಎಂ ಸಿದ್ದರಾಮಯ್ಯ ಮುಸ್ಲಿಂ ಒಲೈಕೆ ಹೇಳಿಕೆ ವಿಚಾರಕ್ಕೆ ಮಾಜಿ ಸಚಿವ ಸಿಟಿ ರವಿ ತಿರುಗೇಟು

- Advertisement -
- Advertisement -

ಮಂಗಳೂರು: ಸಿ.ಎಂ ಸಿದ್ದರಾಮಯ್ಯ ಮುಸ್ಲಿಂ ಒಲೈಕೆ ಹೇಳಿಕೆ ವಿಚಾರಕ್ಕೆ ಮಾಜಿ ಸಚಿವ ಸಿಟಿ ರವಿ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಹೇಳಿಕೆಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಸಿಟಿ ರವಿ ಸಿದ್ದರಾಮಯ್ಯ ಹೇಳಿಕೆ ಅಪಾಯಕಾರಿಯಾದ ಹೇಳಿಕೆ.ಈ ಮಾನಸಿಕತೆಯೆ ದೇಶ ವಿಭಜನೆಗೆ ಕಾರಣವಾಗಿದ್ದು ಎಂದಿದ್ದಾರೆ.ಕಾಂಗ್ರೆಸ್ ಈಸ್ ರಿಯಲ್ ಕಮ್ಯುನಲ್ ಪಾರ್ಟಿ.

ಈ ಮಾನಸಿಕತೆಯೆ ಕೋಮುವಾದ ನೀತಿಯ ನಿದರ್ಶನ ಎಂದ ಅವರು, ಓಲೈಕೆ ರಾಜಕಾರಣ ವೋಟ್ ಬ್ಯಾಂಕ್ ಗಾಗಿ ಈ ರೀತಿಯ ಹೇಳಿಕೆ ನೀಡುವುದು ಅಪಾಯಕಾರಿ.ಈ ದೇಶದ ಸಂಪತ್ತು ದೇಶದ ಭಾರತೀಯರಿಗೆ ಸೇರಿದ್ದು.ಭಾರತೀಯತೆಯನ್ನ ಒಪ್ಪಿದವರಿಗೆ ಸೇರಿದ್ದು . ಭಾರತದಲ್ಲೇ ಇದ್ದು ಭಾರತಕ್ಕೆ ದ್ರೋಹ ಬಗೆಯುವವರಿಗೆ ದೇಶದ ಸಂಪತ್ತಿನಲ್ಲಿ‌ ಅಧಿಕಾರ ಇಲ್ಲ ಎಂದರು.

ಇನನು ಇದೇ ವೇಳೆ ಮಾತನಾಡಿದ ಅವರು ದೇಶದ ಸಂಪತ್ತಿನ ಮೊದಲ ಹಂಚಿಕೆ ಬಡವರಿಗೆ ಆಗಬೇಕು ಅದು ನಮ್ಮ ನೀತಿ.

ಈ ಮಾನಸಿಕತೆ ಭಾರತ ವಿಭಜನೆಗೆ ಕಾರಣವಾಗಿದ್ದು ಎಂದು ಕಾಂಗ್ರೆಸ್ ಮರಿಬಾರದು.ಈ ಒಲೈಕೆಯ ರಾಜನೀತಿ ಪರಿಣಾಮ ಭಾರತ ವಿಭಜನೆಗೆ ಕಾರಣವಾಗಿದ್ದು.40 ಲಕ್ಷ ಜನರ ಮಾರಣಹೋಮಕ್ಕೆ ಕಾರಣವಾಗಿದ್ದು,ಕೋಟ್ಯಂತರ ಜನ ನಿರ್ವಸತಿರಾಗೋದಕ್ಕೆ ಕಾರಣವಾಗಿದ್ದು.ಈ ಮಾನಸಿಕತೆ ರಾಜಕಾರಣದ ಒಂದು ಪ್ರತ್ಯಕ್ಷ ದರ್ಶನ ಎಂದಿದ್ದಾರೆ.

- Advertisement -

Latest News

error: Content is protected !!