Thursday, June 4, 2026
Homeತಾಜಾ ಸುದ್ದಿಬಿಜೆಪಿ ಪ್ರಭಾವಿ ಮುಖಂಡ ಸಿ.ಟಿ ರವಿಗೆ ಒಲಿದ ಅದೃಷ್ಟ; ಮಾಜಿ ಸಚಿವ ಸಿ.ಟಿ ರವಿಗೆ ವಿಧಾನಪರಿಷತ್...

ಬಿಜೆಪಿ ಪ್ರಭಾವಿ ಮುಖಂಡ ಸಿ.ಟಿ ರವಿಗೆ ಒಲಿದ ಅದೃಷ್ಟ; ಮಾಜಿ ಸಚಿವ ಸಿ.ಟಿ ರವಿಗೆ ವಿಧಾನಪರಿಷತ್ ಟಿಕೆಟ್

- Advertisement -
- Advertisement -

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.ಮಾಜಿ ಸಚಿವ ಸಿ.ಟಿ. ರವಿ, ವಿಧಾ‌ನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಮತ್ತು ಮಾಜಿ ಶಾಸಕ ಎಂ.ಜಿ. ಮುಳೆ ಟಿಕೆಟ್ ಪಡೆದಿದ್ದಾರೆ.

ಜೂನ್ 13 ರಂದು 11 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಯಲಿದ್ದು, ಸಂಖ್ಯಾ ಬಲದ ಆಧಾರದಲ್ಲಿ ವಿಪಕ್ಷ ಬಿಜೆಪಿ ಮೂರು ಸ್ಥಾನಗಳನ್ನು ಪಡೆಯಲಿದೆ.

ಸಂಸದ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಹತ್ತಕ್ಕೂ ಹೆಚ್ಚು ಜನ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಒಕ್ಕಲಿಗ, ಗಂಗಾ ಮತಸ್ಥ ಮತ್ತು ಮರಾಠಾ ಸಮುದಾಯಕ್ಕೆ ಈ ಬಾರಿ ಬಿಜೆಪಿ ಅವಕಾಶ ಕಲ್ಪಿಸಿದೆ.

- Advertisement -

Latest News

error: Content is protected !!