Saturday, June 29, 2024
Homeತಾಜಾ ಸುದ್ದಿ2500ಕ್ಕೂ ಅಧಿಕ ಸಿಬ್ಬಂದಿಯನ್ನು ವಜಾಗೊಳಿಸಿದ ಬೈಜೂಸ್; ಐಸಿಸಿ, ಬಿಸಿಸಿಐಗೆ ಎದುರಾಗಿದೆ ಆತಂಕ

2500ಕ್ಕೂ ಅಧಿಕ ಸಿಬ್ಬಂದಿಯನ್ನು ವಜಾಗೊಳಿಸಿದ ಬೈಜೂಸ್; ಐಸಿಸಿ, ಬಿಸಿಸಿಐಗೆ ಎದುರಾಗಿದೆ ಆತಂಕ

spot_img
- Advertisement -
- Advertisement -
ಬೆಂಗಳೂರು ಮೂಲದ ಬೈಜೂಸ್‌ ವಿಶ್ವದ ಅತ್ಯಂತ ಮೌಲ್ಯಯುತ ʻಎಜುಟೆಕ್‌ʼ ಕಂಪನಿಯಾಗಿ ಗುರುತಿಸಿಕೊಂಡಿದೆ. ಆದರೆ ಪ್ರಸ್ತುತ ಕಂಪನಿಯಲ್ಲಿದ್ದ ಪೂರ್ಣಾವಧಿ ಮತ್ತು ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 2500ಕ್ಕೂ ಅಧಿಕ ಸಿಬ್ಬಂದಿಯನ್ನು ವಜಾಗೊಳಿಸಿದೆ. 

ಇನ್ನೂ ಉದ್ಯೋಗ ಕಳೆದುಕೊಂಡವರಲ್ಲಿ ಹೆಚ್ಚಿನವರು ಮಾರಾಟ ಮತ್ತು ಮಾರ್ಕೆಟಿಂಗ್, ಕಾರ್ಯಾಚರಣೆ, ಕಂಟೆಂಟ್‌ ಹಾಗೂ ವಿನ್ಯಾಸ ತಂಡಗಳಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕಂಪನಿಯ ನಿರ್ವಹಣಾ ವೆಚ್ಚ ಕಡಿತಗೊಳಿಸುವ ನಿಟ್ಟಿನಲ್ಲಿ ಸಿಬ್ಬಂದಿಗಳನ್ನು ವಜಾಗೊಳಿಸಲು ಮುಂದಾಗಿರುವುದಾಗಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.

ಬೈಜೂಸ್‌ ಸಂಸ್ಥೆಯಿಂದ ಈ ಸುದ್ದಿ ಹೊರಬರುತ್ತಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್‌ ನಿಯಂತ್ರಣ ಸಂಸ್ಥೆಗೆ (ಬಿಸಿಸಿಐ) ಆತಂಕ ಎದುರಾಗಿದೆ. ಎರಡೂ ಸಂಸ್ಥೆಗಳಿಗೆ ಬೈಜೂಸ್‌ ಪ್ರಮುಖ ಪ್ರಾಯೋಜಕರಾಗಿರುವುದೇ ಈ ಆತಂಕಕ್ಕೆ ಕಾರಣ ಎನ್ನಲಾಗಿದೆ.

- Advertisement -
spot_img

Latest News

error: Content is protected !!