Saturday, June 6, 2026
Homeಕರಾವಳಿಉಡುಪಿಉಡುಪಿಯ ಹಿರಿಯಡ್ಕ ಮೂಲದ ಉದ್ಯಮಿ ಪ್ರಸನ್ನ ಶಿವಮೊಗ್ಗದಲ್ಲಿ ಆತ್ಮಹತ್ಯೆ

ಉಡುಪಿಯ ಹಿರಿಯಡ್ಕ ಮೂಲದ ಉದ್ಯಮಿ ಪ್ರಸನ್ನ ಶಿವಮೊಗ್ಗದಲ್ಲಿ ಆತ್ಮಹತ್ಯೆ

- Advertisement -
- Advertisement -

ಉಡುಪಿ; ಹಿರಿಯಡ್ಕ ಮೂಲದ ಉದ್ಯಮಿ ಪ್ರಸನ್ನ ಶಿವಮೊಗ್ಗದಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಪ್ರಸನ್ನ ಅವರು 3 ದಿನಗಳ ಹಿಂದೆ ತೀರ್ಥಳ್ಳಿಗೆ ಆಗಮಿಸಿ ವಸತಿಗೃಹದಲ್ಲಿ ಉಳಿದುಕೊಂಡಿದ್ದರು.ನಿನ್ನೆ ಕೊಠಡಿಯಿಂದ ಯಾವುದೇ ಶಬ್ದ ಕೇಳಿಸದ ಕಾರಣ ಅನುಮಾನ ಗೊಂಡ ಸಿಬ್ಬಂದಿ ಬಾಗಿಲು ತೆರೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ರೆಸ್ಟೋರೆಂಟ್  ಉದ್ಯಮವನ್ನು ನಡೆಸುತ್ತಿದ್ದಾರೆ. ಸುಮಾರು ಆರು ಪುಟಗಳ ಡೆತ್ ನೋಟ್ ಬರೆದಿಟ್ಟು ಸಾವಿನ ಕಾರಣ ವಿವರಿಸಿದ್ದಾರೆ. ಕೆಲವೊಂದು ಹೆಸರುಗಳನ್ನು ಬರೆದಿದ್ದು ಮತ್ತೆ ಕೆಲವು ತನ್ನ ವ್ಯವಹಾರದ ವಿಷಯಗಳನ್ನು ಬರೆದಿಟ್ಟಿದ್ದರು ಎಂದು ಪೊಲೀಸ್ ಮೂಲದಿಂದ ಮಾಹಿತಿ ಲಭ್ಯವಾಗಿದೆ.

ಅಂತ್ಯಕ್ರಿಯೆಯನ್ನುಅವರ ಹಿರಿಯರ ಮನೆಯಾದ ಕೊಂಡಾಡಿಯಲ್ಲಿ ನೆರವೇರಿಸಲಾಗಿದೆ. ಮೃತರು ಪತ್ನಿ, ಎರಡು ವರ್ಷದ ಪುತ್ರಿ, ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.

- Advertisement -

Latest News

error: Content is protected !!