Wednesday, June 3, 2026
Homeಕರಾವಳಿಉಡುಪಿಉಡುಪಿ: ಗಾಳಿ ತುಂಬುತ್ತಿದ್ದ ವೇಳೆ ಸಿಡಿದ ಟೈರ್; ಸ್ಫೋಟದ ತೀವ್ರತೆಗೆ ಮೇಲಕ್ಕೆ ಹಾರಿದ ಗಾಯಾಳು

ಉಡುಪಿ: ಗಾಳಿ ತುಂಬುತ್ತಿದ್ದ ವೇಳೆ ಸಿಡಿದ ಟೈರ್; ಸ್ಫೋಟದ ತೀವ್ರತೆಗೆ ಮೇಲಕ್ಕೆ ಹಾರಿದ ಗಾಯಾಳು

- Advertisement -
- Advertisement -

ಉಡುಪಿ: ಟೈರ್ ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋಟಗೊಂಡು ಯುವಕ ಗಾಯಗೊಂಡಿರುವ ದುರ್ಘಟನೆ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ನಡೆದಿದೆ.

ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಕೆಪಿಎಸ್ ಪಿಯು ಕಾಲೇಜು ಹಿಂಭಾಗದಲ್ಲಿರುವ ಟೈರ್ ಶಾಪ್ ನಲ್ಲಿ ‌ಈ ಅವಘಡ ಸಂಭವಿಸಿದೆ.

ಖಾಸಗಿ ಶಾಲೆಯ ಬಸ್ ಟೈರ್ ಗೆ ಗಾಳಿ ತುಂಬುತ್ತಿದ್ದ ವೇಳೆ ಸಿಡಿದು, ಗಾಳಿ ತುಂಬುತ್ತಿದ್ದ ಅಬ್ದುಲ್ ರಜೀದ್ (19) ಎಂಬ ಯುವಕ ಗಾಯಗೊಂಡಿದ್ದಾನೆ.

ಗಾಳಿ ತುಂಬಿದ ಕೆಲವೇ ಕ್ಷಣಗಳಲ್ಲಿ ಸ್ಫೋಟ ಸಂಭವಿಸಿದ್ದು, ಅದರ ತೀವ್ರತೆಗೆ ಯುವಕ ಕೆಲವು ಅಡಿಗಳ ಎತ್ತರಕ್ಕೆ ಎಸೆಯಲ್ಪಟ್ಟಿದ್ದಾನೆ

ಅಲ್ಲದೇ, ಕೈ ಮುರಿತಕ್ಕೊಳಗಾಗಿರುವ ಗಾಯಾಳು ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!