Friday, October 16, 2026
Homeತಾಜಾ ಸುದ್ದಿಕಾಲುವೆಗೆ ಉರುಳಿ ಬಿದ್ದ ಬಸ್ : ನೋಡ ನೋಡುತ್ತಿದ್ದಂತೆಯೇ 39 ಮಂದಿ ಜಲಸಮಾಧಿ

ಕಾಲುವೆಗೆ ಉರುಳಿ ಬಿದ್ದ ಬಸ್ : ನೋಡ ನೋಡುತ್ತಿದ್ದಂತೆಯೇ 39 ಮಂದಿ ಜಲಸಮಾಧಿ

- Advertisement -
- Advertisement -

ಮಧ್ಯಪ್ರದೇಶ : ರಾಜ್ಯ ರಾಜಧಾನಿ ಭೋಪಾಲ್ ನಿಂದ 560 ಕಿ.ಮೀ ದೂರದಲ್ಲಿರುವ ಸಿಧಿ ಜಿಲ್ಲೆಯಲ್ಲಿ ಬಸ್ಸೊಂದು ಸೇತುವೆಯಿಂದ ಕಾಲುವೆಗೆ ಉರುಳಿದ ಪರಿಣಾಮ, ಈ ಮೊದಲು 32 ಪ್ರಯಾಣಿಕರು ಮೃತಪಟ್ಟಿದ್ದಾಗಿ ತಿಳಿದು ಬಂದಿತ್ತು. ಇದೀಗ ಸಾವಿನ ಸಂಖ್ಯೆ 39ಕ್ಕೆ ಏರಿಕೆಯಾಗಿದೆ.

54 ಪ್ರಯಾಣಿಕರನ್ನು ಹೊತ್ತು ತೆರಳುತ್ತಿದ್ದಂತ ಬಸ್ಸೊಂದು ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಪಾಟ್ನಾ ಗ್ರಾಮದ ಬಳಿಯ ಕಾಲುವೆಗೆ ಉರುಳಿ ಬಿದ್ದಿತ್ತು. ಇದರಿಂದಾಗಿ 32 ಪ್ರಯಾಣಿಕರು ಸಾವನ್ನಪ್ಪಿದ್ದಾಗಿ ತಿಳಿದು ಬಂದಿತ್ತು. ಇದೀಗ ಸಾವಿನ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. 7 ಮಂದಿಯನ್ನು ರಕ್ಷಿಸಲಾಗಿದೆ. ಉಳಿದ ಎಂಟು ಮಂದಿಯ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.

- Advertisement -

Latest News

error: Content is protected !!